ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಖಾಯಂ ವಿಳಾಸ ನೀಡುವುದು ಸುಲಭವಲ್ಲ. ಆಧಾರ್ ಕಾರ್ಡ್ ಹೊಂದಿರುವ ಜನರು ಬಾಡಿಗೆ ಮನೆ ಬದಲಿಸಿದಾಗ ಅದ್ರ ವಿಳಾಸ ಬದಲಿಸಬೇಕು. ಯುಐಡಿಎಐ ಬಾಡಿಗೆದಾರರ ಆಧಾರ್ ವಿಳಾಸ ನವೀಕರಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಿದೆ.
ಆಧಾರ್‌ನಲ್ಲಿ ನಿಮ್ಮ ಬಾಡಿಗೆ ಮನೆ ವಿಳಾಸವನ್ನು ಬದಲಾಯಿಸಲು ನೀವು ಮೊದಲು ನಿಮ್ಮ ಬಾಡಿಗೆ ಒಪ್ಪಂದವನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. ಇದರ ನಂತರ ಆ ಡಾಕ್ಯುಮೆಂಟ್‌ನ ಪಿಡಿಎಫ್ ಅನ್ನು ಆಧಾರ್‌ನ ವೆಬ್‌ಸೈಟ್‌ನಲ್ಲಿ ನವೀಕರಿಸಬೇಕು. ಇದಕ್ಕಾಗಿ https://uidai.gov.in ಗೆ ಹೋಗಬೇಕು.
ಮುಖಪುಟದಲ್ಲಿರುವ ವಿಳಾಸ ನವೀಕರಣದ ಮೇಲೆ ಕ್ಲಿಕ್ ಮಾಡಿ. ಹೊಸ ಪೇಜ್ ಓಪನ್ ಆದ ಮೇಲೆ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ ಲಾಗ್ ಇನ್ ಆಗಿ. ಮೊಬೈಲ್ ನಂಬರ್ ಗೆ ಬರುವ ಒಟಿಪಿ ನಮೂದಿಸಿ ಪೋರ್ಟಲ್ ಗೆ ಹೋಗಿ. ಇಲ್ಲಿ ವಿಳಾಸದ ಸ್ಕ್ಯಾನ್ ಅಪ್ಲೋಡ್ ಮಾಡಿ ನವೀಕರಣ ಮಾಡಬೇಕು.
ಆಧಾರ್ ವೆಬ್ಸೈಟ್ ನಲ್ಲಿ ಆಧಾರ್ ನವೀಕರಣದ ಫಾರ್ಮ್ ಡೌನ್ಲೋಡ್ ಮಾಡಿ, ಅದನ್ನು ಭರ್ತಿ ಮಾಡಿ, ಬೇಕಾದ ದಾಖಲೆ ನೀಡಿ ನೀವು ಆಧಾರ್ ಕೇಂದ್ರಕ್ಕೆ ಹೋಗಿ ಸಲ್ಲಿಸಬಹುದು.