ಈಗಷ್ಟೇ ನಡೆದಾಡುವುದನ್ನ ಕಲಿತಿರುವ ಮಗು ಡ್ರಮ್ಸ್ ಬಾರಿಸುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ. ಡ್ರಮ್ಮರ್ ಒಬ್ಬರ ಮಗು ತನ್ನ ತಂದೆಯ ಜಾಗದಲ್ಲಿ ಕುಳಿತು ಅವರ ಮಾರ್ಗದರ್ಶನದಲ್ಲಿ ಡ್ರಮ್ ನುಡಿಸಲು ಶುರು ಮಾಡುತ್ತದೆ.
ಅದರಲ್ಲೂ ಹಾಡು, ಸಂಗೀತಕ್ಕೆ ತಕ್ಕಂತೆ ಮಗ್ನನಾಗಿ ಪುಟ್ಟ ಕೈಗಳಲ್ಲಿ ಸ್ಟಿಕ್ ಹಿಡಿದು, ಸಂಗೀತ – ತಾಳಕ್ಕೆ ತಕ್ಕಂತೆ ಡ್ರಮ್ಸ್ ಬಾರಿಸುತ್ತಿರುವಾಗ ಕಂದಮ್ಮನ ಕೈ ಬೆರಳಿಗೆ ಪೆಟ್ಟಾಗುತ್ತದೆ.
ತಕ್ಷಣವೇ ಕೈಯನ್ನ ತಂದೆಯ ಬಳಿಗೆ ಒಯ್ದು ಅಳುವಿನ ಮುಖ ಮಾಡಿಕೊಳ್ಳುತ್ತದೆ. ಆ ಕೈಗೊಂದು ಅಪ್ಪನ ಮುತ್ತು ಸಿಕ್ಕಿದ್ದೇ ತಡ, ಮತ್ತೆ ಸಾವರಿಸಿಕೊಂಡು ಡ್ರಮ್ ವಾದನ ಮುಂದುವರಿಸುತ್ತದೆ. ಈ ಮುದ್ದಾದ ಕಂದನ ವಿಡಿಯೋ 2.3 ದಶಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿದ್ದು, 27 ಸಾವಿರ ಬಾರಿ ರಿಟ್ವೀಟ್ ಆಗಿದೆ. 91 ಸಾವಿರ ಮಂದಿ ಮೆಚ್ಚಿಕೊಂಡಿದ್ದಾರೆ.
https://twitter.com/oliverkremer/status/1279337500247576576?ref_src=twsrc%5Etfw%7Ctwcamp%5Etweetembed%7Ctwterm%5E1279337500247576576%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fwatch-toddler-playing-drums-like-a-pro-with-dad-is-winning-hearts-2705337.html