ಉಡ ಹಿಡಿದರೆ ಬಿಡುವುದಿಲ್ಲ ಎಂಬ ನಾಣ್ನುಡಿ ಇದೆ. ಉತ್ತರ ಪ್ರದೇಶದ ಪೌಡಿ ಎಂಬಲ್ಲಿ ಮರವೇರುತ್ತಿದ್ದ ತನ್ನ ಬಾಲಕ್ಕೆ ಬಾಯಿ ಹಾಕಿದ ನಾಯಿಗಳ ಜೊತೆ ಉಡವೊಂದು ಕಾಳಗ ನಡೆಸಿದೆ.
ವಿಡಿಯೋ ವೈರಲ್ ಆಗಿದ್ದು, ದೇವದಾರು ಮರ ಹತ್ತಿ ಮೇಲೇರುತ್ತಿದ್ದ ಉಡವನ್ನು ಕಂಡ ಎರಡು ನಾಯಿಗಳು ಬೊಗಳಲಾರಂಭಿಸಿದವು.
ಇನ್ನೇನು ಮರವೇರಿ ಮೇಲೆ ಹೋಗಬೇಕು ಎನ್ನುವಷ್ಟರಲ್ಲಿ ಬೊಗಳುತ್ತಿದ್ದ ನಾಯಿಗಳು ಉಡದ ಬಾಲಕ್ಕೆ ಬಾಯಿ ಹಾಕಿದವು.
ಒಂದು ನಾಯಿ ತನ್ನ ಬಾಯಲ್ಲಿ ಉಡದ ಬಾಲ ಕಚ್ಚಿ ಹಿಡಿದರೆ, ಇನ್ನೊಂದು ನಾಯಿ ಬೊಗಳುತ್ತಲೇ ಉಡವನ್ನ ಹೆದರಿಸುತ್ತದೆ.
ಯಾವುದಕ್ಕೂ ಜಗ್ಗದ ಉಡ, ಮರವನ್ನು ಗಟ್ಟಿಯಾಗಿ ಹಿಡಿದಿರುತ್ತದೆ. ಸ್ವಲ್ಪ ಸಡಿಲಗೊಳಿಸಿದಾಕ್ಷಣ ಉಡವನ್ನು ಎರಡು ನಾಯಿಗಳೂ ಬಾಲ ಎಳೆದು ಮರದಿಂದ ಕೆಳಗುರುಳಿಸಿದವು. ತನ್ನ ಪ್ರಯತ್ನ ಬಿಡದೆ ಮುಂದುವರಿಸಿದ ಉಡ, ನಾಯಿಗಳಿಂದ ತಪ್ಪಿಸಿಕೊಂಡು ಮತ್ತೆ ಮರ ಹತ್ತಲು ಹೋಗುತ್ತದೆ. ಶ್ವಾನಗಳೂ ಶತಪ್ರಯತ್ನ ಮಾಡಿ ಮತ್ತೆ ಉಡವನ್ನು ಕೆಡವುತ್ತವೆ. ಉಡ – ಶ್ವಾನಗಳ ನಡುವೆ ನಡೆಯುತ್ತಿದ್ದ ಕಾಳಗ ಗಮನಿಸಿದ ಜನರು, ನಾಯಿಗಳನ್ನು ಓಡಿಸಿ ಉಡವನ್ನು ಉಳಿಸಿದರು.
https://www.facebook.com/himanshubhatt000/videos/276459820298463