ನೀವು ಪಿಪಿಎಫ್ ಖಾತೆದಾರರೇ…? ಹಾಗಾದ್ರೆ ನಿಮಗೊಂದು ಮಹತ್ವದ ಸುದ್ದಿ ಇದೆ. ನೀವು ಈ ಸುದ್ದಿಯನ್ನು ನೋಡಲೇಬೇಕು. ಪಿಪಿಎಫ್ ಖಾತೆಗೆ ಸಂಬಂಧಿಸಿದಂತೆ ಒಂದಿಷ್ಟು ಬದಲಾವಣೆಗಳನ್ನು ತರಲಾಗಿದೆ. ಏನದು ಅಂತೀರಾ ಮುಂದೆ ಓದಿ.
ಸಣ್ಣ ಉಳಿತಾಯ ಯೋಜನೆಯ ಸಾರ್ವಜನಿಕ ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಇದೀಗ ಮಹತ್ವದ ಬದಲಾವಣೆಯೊಂದನ್ನು ಜಾರಿಗೆ ತರಲಾಗುತ್ತಿದೆ. ಪಿಪಿಎಫ್ ಹೂಡಿಕೆದಾರರ ಖಾತೆ ವಿಸ್ತರಣೆ ನಿಯಮಗಳನ್ನು ಸಡಿಲಿಸಲಾಗಿದ್ದು, ಆ ಖಾತೆದಾರರು ಮುಕ್ತಾಯದ ನಂತರ ತಮ್ಮ ಖಾತೆಯನ್ನು ಸಕ್ರಿಯಗೊಳಿಸಲು ಇಚ್ಚಿಸಿದ್ದಲ್ಲಿ ಅಂತವರಿಗೆ ಆನ್‌ಲೈನ್ ಮೂಲಕ ಅನುಕೂಲವನ್ನು ಮಾಡುತ್ತಿದೆ ಸರ್ಕಾರ.
ಲಾಕ್ ಡೌನ್ ನಿಂದಾಗಿ ಇದರ ವಿಸ್ತರಣೆ ಫಾರ್ಮ್ ಸಲ್ಲಿಸಲು ಸಾಧ್ಯವಾಗದೇ ಇದ್ದಲ್ಲಿ ಈಗ ಹೂಡಿಕೆದಾರರು ತಮ್ಮ ವಿಸ್ತರಣಾ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ನೋಂದಾಯಿತ ಇಮೇಲ್ ಐಡಿ ಮೂಲಕ ಸಲ್ಲಿಸಬಹುದು. ಜುಲೈ 31ರೊಳಗೆ ತಮ್ಮ ಫಾರ್ಮ್‌ಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಲಾಕ್ ಡೌನ್ ಮುಗಿದ ಮೇಲೆ ಮೂಲ ನಕಲನ್ನು ಬ್ಯಾಂಕ್ ಗೆ ಸಲ್ಲಿಸಬೇಕು.