ಥರಾವರಿ ಹೇರ್ ಸ್ಟೈಲ್‌ಗಳ ಟ್ರೆಂಡ್ ಇಂದು ನೆನ್ನೆಯದಲ್ಲ. ಮಾನವರ ಕೇಶ ವಿನ್ಯಾಸದ ಬಗ್ಗೆ ಬಹಳಷ್ಟು ಕೇಳಿದ್ದೇವೆ, ನೋಡಿದ್ದೇವೆ. ಆದರೆ ತಮಿಳುನಾಡಿನಲ್ಲಿ ಆನೆ ಮರಿಯೊಂದು ತನ್ನ ವಿಶಿಷ್ಟ ಹೇರ್ ಸ್ಟೈಲ್‌ನಿಂದ ನೆಟ್‌ನಲ್ಲಿ ಸುದ್ದಿ ಮಾಡ್ತಿದೆ.
ತಮಿಳುನಾಡಿನ ಮನ್ನಾರ್‌ಗುಡಿಯ ರಾಜಗೋಪಾಲಸ್ವಾಮಿ ದೇವಸ್ಥಾನದಲ್ಲಿರುವ ಸೆಂಗಮಲಂ ಹೆಸರಿನ ಆನೆ ಮರಿಯೊಂದಕ್ಕೆ ಬಾಬ್-ಕಟ್ ಮಾಡಿಸಿದ್ದು, ಈ ಕಾರಣದಿಂದ ಆನೆಗೆ ’ಬಾಬ್-ಕಟ್ ಸೆಂಗಮಲಂ’ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ.
ಆನೆಯ ಈ ಅದ್ಧೂರಿ ಕೇಶ ವಿನ್ಯಾಸಕ್ಕೆ ಫಿದಾ ಆಗಿರುವ ನೆಟ್ಟಿಗರು, ಟ್ವಿಟರ್ ನಲ್ಲಿ ಇದರ ಫೋಟೋಗಳು ಬಲೇ ವೈರಲ್ ಆಗಿವೆ. ಈ ಚಿತ್ರಕ್ಕೆ 15,000ಕ್ಕೂ ಹೆಚ್ಚು ಲೈಕ್‌ಗಳು ಸಿಕ್ಕಿದ್ದು, 2,500 ಬಾರಿ ರೀಟ್ವೀಟ್ ಸಹ ಮಾಡಲಾಗಿದೆ.