ಸುಮಾರು 92 ವರ್ಷಗಳ ಹಿಂದೆ 1928 ರಲ್ಲಿ ಸ್ಪ್ಯಾನಿಷ್ ಪ್ಲೂ ಎಂಬ ಸಾಂಕ್ರಾಮಿಕ ರೋಗ ಬಂದಾಗ ಅಂದಿನ ಬೆಂಗಳೂರು ಸಿಟಿ ಮುನ್ಸಿಪಲ್ ಕೌನ್ಸಿಲ್ ಆರೋಗ್ಯ ಇಲಾಖೆ ಅಧಿಕಾರಿಗಳು ಜಾರಿಮಾಡಿದ್ದ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಂದು ಕೂಡ ಇದೇ ರೀತಿ ಸಾಮಾಜಿಕ ಅಂತರ ಕಾಪಾಡುವ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಬಗ್ಗೆ ಸಲಹೆಗಳನ್ನು ನೀಡಲಾಗಿದೆ. ಜನರು ಗುಂಪಾಗಿ ಸೇರತಕ್ಕ ಸ್ಥಳಗಳು ಅಂದರೆ ಸಿನಿಮಾ ನಾಟಕಗಳಿಗೆ ಹೋಗಬಾರದು. ಕೆಮ್ಮುತ್ತಿರುವವರ ಸಮೀಪದಲ್ಲಿ ಸೇರಬಾರದು. ರಾತ್ರಿ-ಹಗಲು ಒಳ್ಳೆ ಗಾಳಿ ಬೀಸುವ ಜಾಗದಲ್ಲಿ ಇರಬೇಕು. ದೇಹಕ್ಕೆ, ಮನಸ್ಸಿಗೆ ಆಲಸ್ಯವಾಗುವಂತೆ ದುಡಿದು ಕೆಲಸ ಮಾಡಬಾರದು ಎಂಬುದು ಸೇರಿದಂತೆ ವಿವಿಧ ಸಲಹೆಗಳನ್ನು ಒಳಗೊಂಡ ನೋಟಿಸ್ ಅನ್ನು ಬೆಂಗಳೂರು ಸಿಟಿ ಮುನ್ಸಿಪಲ್ ಕೌನ್ಸಿಲ್ ಹೆಲ್ತ್ ಡಿಪಾರ್ಟ್ ಮೆಂಟ್ ಹೊರಡಿಸಿದ್ದು, ಈಗ ಕೊರೋನಾ ಕಾಲದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.