ನವದೆಹಲಿ: ಲಾಕ್ಡೌನ್ ಸಂದರ್ಭದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯಲು ಸಾಧ್ಯವಾಗದವರಿಗೆ ಅನುಕೂಲವಾಗುವಂತೆ ವಯೋಮಿತಿಯನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ.
2020 ರ ಮಾರ್ಚ್ 25 ರಿಂದ ಜೂನ್ 30ರೊಳಗೆ 10 ವರ್ಷ ಆದ ಹೆಣ್ಣುಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಜುಲೈ 31 ರವರೆಗೆ ಕಾಲಾವಕಾಶ ನೀಡಲಾಗಿದೆ. ಸಾಮಾನ್ಯ ದಿನಗಳ ಸಂದರ್ಭದಲ್ಲಿ 10 ವರ್ಷದ ನಂತರ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ. ಈಗ ವಯೋಮಿತಿ ಅರ್ಹತೆಯ ನಿಯಮಗಳನ್ನು ಅಂಚೆ ಇಲಾಖೆ ಸಡಿಲಗೊಳಿಸಿದೆ.
ಈ ಯೋಜನೆಯಡಿ ಶೇಕಡ 7.6 ರಷ್ಟು ಬಡ್ಡಿ ಸಿಗಲಿದೆ. ಒಂದು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿವರೆಗೂ ಕಂತುಗಳಲ್ಲಿ ಇಲ್ಲವೇ ಒಂದೇ ಸಲ ಹೂಡಿಕೆ ಮಾಡಬಹುದು. ಒಂದು ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಖಾತೆಯಂತೆ ಇಬ್ಬರು ಪುತ್ರಿಯರ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದಾಗಿದೆ. 15 ವರ್ಷದ ವರೆಗೂ ಯೋಜನೆಗೆ ಹಣ ಹೂಡಿಕೆ ಮಾಡಬಹುದು. ಆದಾಯ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ.