ಸರೀಸೃಪಗಳ ಬಗ್ಗೆ ಸದಾ ಪೋಸ್ಟ್ ಹಾಕುವ ಇರ್ಯಾನ್ ಮೆಗ್ಗಿ ಈ ಬಾರಿ ಓತಿಕ್ಯಾತ ಹುಡುಕುವ ಸವಾಲು ಹಾಕಿದ್ದಾರೆ.
ಅರಿಜೋನದ ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರ ವಿಶ್ವವಿದ್ಯಾಲಯದಲ್ಲಿ ಸರೀಸೃಪಗಳ ಬಗ್ಗೆ ಪಿ.ಎಚ್.ಡಿ. ಮಾಡುತ್ತಿರುವ ಮೆಗ್ಗಿ, ಒಂದಿಲ್ಲೊಂದು ಪೋಸ್ಟ್ ಮೂಲಕ ಟ್ವಿಟ್ಟರ್ ನಲ್ಲಿ ಗಮನ ಸೆಳೆಯುತ್ತಲೇ ಇರುತ್ತಾರೆ.
ಇದೀಗ ಕಟ್ಟಿಗೆಗಳ ಫೋಟೋವೊಂದನ್ನು ಹಾಕಿದ್ದು, ಅದರಲ್ಲಿ ಅಡಗಿರುವ ಒತಿಕ್ಯಾತ ಹುಡುಕಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಕೆಲವರು ಕಟ್ಟಿಗೆಯ ಬಣ್ಣ, ಹಲ್ಲಿ ಜಾತಿಯ ಓತಿಕ್ಯಾತದ ಬಣ್ಣ ಒಂದೇ ನಮೂನೆಯಲ್ಲಿದ್ದು, ಹುಡುಕಲು ಹುಳ ಬಿಟ್ಟುಕೊಂಡಿದ್ದಾರೆ. ಇನ್ನೂ ಕೆಲವರು ಹುಡುಕುವ ಮೂಲಕ ಸವಾಲು ಪೂರ್ಣಗೊಳಿಸಿದ್ದಾರೆ.