ಬಾತುಕೋಳಿ ಹಾಗೂ ಅದರ ಎರಡು ಮರಿಗಳು ರಸ್ತೆ ದಾಟಲು ನೆರವಾದ ಅಮೆರಿಕ ಸಂಸದರೊಬ್ಬರು ಟ್ರಾಫಿಕ್ ಅಡ್ಡಗಟ್ಟಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮ್ಯಾನ್‌ಹಟನ್ ಸೈಡ್‌ವಾಕ್‌ನಲ್ಲಿ ಅಡ್ಡಾಡುತ್ತಿದ್ದ ಬಾತುಕೋಳಿ & ಫ್ಯಾಮಿಲಿಯ ನೆರವಿಗೆ ಬಂದ ರಿಪಬ್ಲಿಕನ್ ಸಂಸದೆ ಕಥ್ಲೀನ್ ರೈಸ್ ಹಾಗೂ ಇತರ ನಾಲ್ವರು, ಪಕ್ಕದ ಮುಖ್ಯ ದಾರಿಯನ್ನು ದಾಟಿ ಹೋಗಲು ನೆರವಾಗಿದ್ದಾರೆ.
ಇವರುಗಳ ಪ್ರಯತ್ನದಿಂದ ರಸ್ತೆಯಲ್ಲಿ ಓಡಾಡುತ್ತಿದ್ದ ಕಾರುಗಳು ಕೆಲ ಕ್ಷಣಗಳ ಮಟ್ಟಿಗೆ ನಿಂತು, ಆ ಬಾತುಕೋಳಿಗಳು ರಸ್ತೆಯ ಮತ್ತೊಂದು ಬದಿಯಲ್ಲಿರುವ ಸೈಡ್ ವಾಕ್‌ನತ್ತ ಧಾವಿಸಲು ಸಾಧ್ಯವಾಗಿದೆ.