ಬೆಲ್ಜಿಯಂ: ಅಯ್ಯೋ ಈ ಕೊರೋನಾ ಕಾಲದಲ್ಲಿ ಮಾಸ್ಕ್ ಹಾಕಿಕೊಂಡು ಹೊರಗೆ ಓಡಾಡುವುದರಿಂದ ಯಾರದ್ದೂ ಐಡೆಂಟಿಟಿ ಸಿಗದ ಹಾಗಾಗಿದೆ. ಹೀಗಾಗಿ ಮಾಸ್ಕ್ ಹಾಕಬೇಕು, ಹಾಗೆಯೇ ಮುಖವೂ ಕಾಣಬೇಕು ಎಂಬ ನಿಟ್ಟಿನಲ್ಲಿ ಬೆಲ್ಜಿಯಂ ಕಂಪನಿಯೊಂದು ಮಾಸ್ಕ್ ತಯಾರಿಸಿದೆ.
ಹೌದು. ಇದನ್ನು ಜನ್ವಲ್ ಎಂಬಲ್ಲಿ ತಯಾರಿಸಲಾಗುತ್ತಿದ್ದು, ಅದೇ ವ್ಯಕ್ತಿಯ ಫೋಟೋ ತೆಗೆದು ಮಾಸ್ಕ್ ಮಾಡಿ ಕೊಡಲಾಗುತ್ತದೆ. ಇದಕ್ಕಾಗಿ ಸಾಫ್ಟ್‌ವೇರ್ ವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಇದಕ್ಕೆ ಫೋಟೋ ಬೂತ್ ಬೇಕಿದೆ.
ಹೀಗೆ ಮಾಸ್ಕ್ ತಯಾರಿಸಿಕೊಳ್ಳಲು ಆ್ಯಪ್ ವೊಂದರ ಸಹಾಯವೂ ಬೇಕಿದೆ. ಆ ಪೋಟೋ ಬೂತ್ ಎದುರು ಮುಖ ಇಟ್ಟರೆ ಆ ಆ್ಯಪ್ ಮುಖದ ಚಹರೆ ಹಿಡಿದುಕೊಂಡು ಮಾಸ್ಕ್ ಗೆ ಸರಿಹೊಂದುಕೊಳ್ಳುವಂತೆ ಪ್ರಿಂಟ್ ಮಾಡಲು ಅನುಕೂಲ ಮಾಡಿಕೊಡುತ್ತದೆ. ಚಾರ್ಲ್ಸ್ ಡೆ ಬೆಲ್ಲೆಫ್ರೊಯ್ಡ್ ಎಂಬುವವರು ಈ ನೂತನ ಮಾಸ್ಕ್ ಅನ್ನು ಕಂಡುಹಿಡಿದಿದ್ದಾರೆ. ಅಂದಹಾಗೆ ಈ ಮಾಸ್ಕ್ ಒಂದಕ್ಕೆ 20 ಯೂರೋ ಅಂದರೆ ಭಾರತದಲ್ಲಿ 1500 ರೂಪಾಯಿ ಆಗುತ್ತದೆ. ಇದನ್ನು 8ರಿಂದ 10 ಬಾರಿ ತೊಳೆದು ಬಳಸಬಹುದಾಗಿದೆ.