![](https://kannadadunia.com/wp-content/uploads/2020/07/Untitled_design_-_2020-07-05T183224.924.jpg)
ಭಾರತ ಸೇರಿದಂತೆ ವಿಶ್ವಕ್ಕೆ ಕೊರೋನಾ ಮಹಾಸೋಂಕು ಹರಡಿದ ಚೀನಾ ವಿರುದ್ಧ ಒಂದೊಂದೇ ವಿರೋಧಗಳು ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗತೊಡಗಿವೆ. ಈಗ ಚೀನಾ ಕೊರೋನಾ ಹರಡಿದ ಪರಿ ಬಗ್ಗೆ ಹಿಂದಿ ಹಾಡಿನ ರೀಮಿಕ್ಸ್ ಹಾಡುಗಳು ಹುಟ್ಟಿಕೊಳ್ಳುತ್ತಿದ್ದು, ಅಂಥದ್ದೊಂದು ವಿಡಿಯೋ ಹಾಡು ಈಗ ವೈರಲ್ ಆಗಿದೆ.
ಬ್ರಹ್ಮ ಚಲೆನಿ ಎಂಬುವವರು ಚೀನಾವನ್ನು ಅಪಹಾಸ್ಯ ಮಾಡಿದ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ಈಗ ಸಖತ್ ವೈರಲ್ ಆಗಿದೆ. ಇಲ್ಲಿ ಚೀನಾದ ವುಹಾನ್ ನಿಂದ ಹೇಗೆ ಕೊರೋನಾ ಇಡೀ ವಿಶ್ವಕ್ಕೆ ಹಬ್ಬಿತು ಎಂಬ ಸಾಲುಗಳನ್ನು ಹಿಂದಿಯ ‘ಯಾರಾನಾ’ ಚಲನಚಿತ್ರದ ಚೂಕರ್ ಮೇರೆ ಮನ್ ಕೋ ಹಾಡಿನ ಟ್ಯೂನ್ ಗೆ ತಕ್ಕಂತೆ ಮಾಡಿ ವಿಡಿಯೋ ಮಾಡಿದ್ದಾರೆ.
ಯೂಟ್ಯೂಬ್ ನಲ್ಲಿ ಟ್ರೂಥಿಸ್ಟ್ ಎಂಬ ಪುಟದಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಚೇತನ್ ಅರೋರಾ ಎಂಬುವರು ಹಾಡಿದ್ದಾರೆ. ಹೇಗೆ ಜಗತ್ತಿಗೆ ಹರಡಿದೆ ಓ ಕೊರೋನಾ…..ನೀನು ಚೀನಾದ ಕೆಲವು ಪ್ರಯೋಗಾಲಯದಲ್ಲಿ ಹುಟ್ಟಿಕೊಂಡೆಯಾ…? ಎಂಬಿತ್ಯಾದಿ ಸಾಲುಗಳು ಈ ಹಾಡಿನಲ್ಲಿವೆ.