ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಭಾರತದ ಯೋಧರೊಂದಿಗೆ ಚೀನಾ ಸೈನಿಕರು ಸಂಘರ್ಷ ನಡೆಸಿದ್ದು, ಈ ಘಟನೆಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಚೀನಾ ಸೈನಿಕರಿಗೆ ಭಾರತೀಯ ಯೋಧರು ಸಹ ತಕ್ಕ ಪ್ರತ್ಯುತ್ತರ ನೀಡಿದ್ದು, ಅವರ ಕಡೆಯಲ್ಲೂ ಸಾವು-ನೋವುಗಳು ಸಂಭವಿಸಿದ್ದವು.
ಇದಾದ ಬಳಿಕ ಮತ್ತೊಂದು ಪಾಠ ಕಲಿಸಲು ಮುಂದಾದ ಭಾರತ, ಚೀನಾ ಮೂಲದ 59 ಮೊಬೈಲ್ ಆಪ್ ಗಳನ್ನು ನಿಷೇಧಿಸಿದ್ದು, ಇದು ಆರ್ಥಿಕವಾಗಿ ಚೀನಾಗೆ ದೊಡ್ಡ ಹೊಡೆತ ನೀಡಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಸ್ಟಾರ್ಟಪ್ ಸಮುದಾಯಕ್ಕೆ ಚಾಲೆಂಜ್ ಒಂದನ್ನು ನೀಡಿದ್ದಾರೆ.
ಆತ್ಮ ನಿರ್ಭರ್ ಭಾರತ್ ಆಪ್ ಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ತೊಡಗಿಸಿಕೊಳ್ಳುವಂತೆ ನರೇಂದ್ರ ಮೋದಿಯವರು ಸ್ಟಾರ್ಟಪ್ ಸಮುದಾಯಕ್ಕೆ ಚಾಲೆಂಜ್ ನೀಡಿದ್ದು, ಸ್ಟಾರ್ಟಪ್ ಉತ್ತೇಜಿಸುವ ಸಲುವಾಗಿ ಪ್ರಧಾನಿಯವರು ಈ ಚಾಲೆಂಜ್ ನೀಡಿದ್ದಾರೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.