ಸುಗ್ರೀವಾಜ್ಞೆ ಮೂಲಕ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆಗೆ ತಿದ್ದುಪಡಿ ತಂದಿದ್ದ ರಾಜ್ಯ ಸರ್ಕಾರ, ಇದೀಗ ಮತ್ತೊಂದು ಮಹತ್ವದ ತೀರ್ಮಾನ ಕೈಗೊಳ್ಳಲು ಮುಂದಾಗಿದ್ದು, ಇದು ಎಪಿಎಂಸಿ ವರ್ತಕರಿಗೆ ಅನುಕೂಲಕರವಾಗಿರಲಿದೆ.
ಹೌದು, ಎಪಿಎಂಸಿಯಲ್ಲಿ ವರ್ತಕರಿಂದ ವಸೂಲಿ ಮಾಡುವ ಶುಲ್ಕ ಕಡಿತ ಮಾಡಲು ಚಿಂತನೆ ನಡೆಸಲಾಗಿದ್ದು, ಜುಲೈ 9 ರಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆದುಕೊಳ್ಳುವ ಸಾಧ್ಯತೆ ಇದೆ.
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಕಾರಣ ಎಪಿಎಂಸಿ ಪ್ರಾಂಗಣದ ಹೊರಗೂ ವ್ಯಾಪಾರ – ವಹಿವಾಟು ನಡೆಸುವ ಮುಕ್ತ ಅವಕಾಶವಿದೆ. ಆದರೆ ಪ್ರಾಂಗಣದ ಒಳಗೆ ವಹಿವಾಟು ನಡೆಸುವವರಿಗೆ ಒಂದೂವರೆ ಪರ್ಸೆಂಟ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದರಿಂದ ತಾರತಮ್ಯ ಮಾಡಿದಂತಾಗುತ್ತದೆ ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.