ಟೋಕಿಯೋ: ಕೊರೊನಾ ಮಹಾಮಾರಿ ಹಾಗೂ ಲಾಕ್ಡೌನ್ ಪರಿಸ್ಥಿತಿಗಳು ಭಯಾನಕ ಭೂತದ ಸಿನೆಮಾದಂತೆ ಇದ್ದವು. ಸದ್ಯ ವಿವಿಧೆಡೆ ಲಾಕ್ಡೌನ್ ಮುಗಿದು ಜನ ನಿಧಾನಕ್ಕೆ ಮಾಸ್ಕ್ ಹಾಕಿ ಮನೆಯಿಂದ ಹೊರ ಬರುತ್ತಿದ್ದಾರೆ. ಆದರೆ, ಜಪಾನ್ನಲ್ಲಿ ಮಾತ್ರ ಇದನ್ನು ನೋಡಿ ಭಯಗೊಳ್ಳುತ್ತಿದ್ದಾರೆ. ಏನದು ಗೊತ್ತಾ..?
ಜಪಾನ್ನಲ್ಲಿ ಜನರನ್ನು ಬೆಚ್ಚಿ ಬೀಳಿಸುವ ದೆವ್ವದ ಶೋ ಒಂದು ಈಗ ಪ್ರಸಿದ್ಧವಾಗಿದೆ. ಹೆದರಿಸುವ ತಂಡ ಎಂಬರ್ಥ ನೀಡುವ ‘ಕೊವಾಗಾರಸೆಟೈ’ ಎಂಬ ಹೆಸರಿನ ತಂಡ ದೆವ್ವದ ಕಥೆ ಇರುವ ಕೊಲೆಯ ಸನ್ನಿವೇಶ, ದೆವ್ವಗಳಿರುವ ಭೀಕರ ರೂಪಕವನ್ನು ವಿವಿಧೆಡೆ ಮಾಡಿ ತೋರಿಸುತ್ತಿದೆ.
ಈ ಮೊದಲು ಪಾರ್ಕ್ಗಳಲ್ಲಿ ಈ ಶೋ ಮಾಡಲಾಗುತ್ತಿತ್ತು. ಕೊರೊನಾ ವೈರಸ್ ಅದಕ್ಕೆ ಕಲ್ಲು ಹಾಕಿದೆ. ಈಗ ಅದನ್ನು ಡ್ರೈವ್ ಇನ್ ಶೋ ಆಗಿ ಪರಿವರ್ತಿಸಲಾಗಿದೆ. ಕಾರ್ ಗ್ಯಾರೇಜ್ನಲ್ಲಿ ಈ ಶೋ ಮಾಡಲಾಗುತ್ತದೆ. ಸಣ್ಣ ಸೌಂಡ್ ಸಿಸ್ಟಂ ಕಾರಿಗೆ ನಕಲಿ ರಕ್ತದ ಕಲೆ ಅಂಟಿಸುವುದು ಮುಂತಾದವನ್ನು ಮಾಡುವ ಮೂಲಕ ಕಥೆಯನ್ನು ಹೇಳಲಾಗುತ್ತದೆ.
ಒಟ್ಟು 11 ಕಾರುಗಳಲ್ಲಿ ಕಲಾವಿದರ ತಂಡ ಪ್ರತಿ ದಿನ ತೆರಳುತ್ತದೆ. ಒಂದು ಶೋಕ್ಕೆ 9 ಸಾವಿರ ಯೆನ್ ಎಂದರೆ 6251 ರೂಪಾಯಿಗಳು ಖರ್ಚಾಗುತ್ತವೆ. ಡ್ರೈವ್-ಇನ್ ಶೋ ಈಗ ಜನರಿಗೆ ಹಂಟೆಡ್ ಹೌಸ್ ಶೋಧ ಅನುಭವ ನೀಡುತ್ತಿದೆ. ನಾವು ಇದನ್ನು ಕೊರೋನಾ ವೈರಸ್ ಹರಡುವಿಕೆ ಇರುವವರೆಗೂ ಮುಂದುವರಿಸುತ್ತೇವೆ ಎಂದು ತಂಡದ ಸಂಯೋಜಕ ಕೆಂಟಾ ಲಾವಾನಾ ತಿಳಿಸಿದ್ದಾರೆ.