ನಾವೆಲ್ಲಾ ಶಾಲೆಯಲ್ಲಿ ಓದುತ್ತಿದ್ದಾಗ ವಿಜ್ಞಾನ ನಿಯಮಗಳನ್ನು ತಿಳಿದುಕೊಂಡು, ಅವುಗಳನ್ನು ಸಣ್ಣ ಪುಟ್ಟ ಸರಳ ಪ್ರಯೋಗಗಳೊಂದಿಗೆ ತಿಳಿದುಕೊಂಡು ಬಹಳ ಅಚ್ಚರಿ ಪಡುತ್ತಿದ್ದೆವು.
ಅದರಲ್ಲೂ ಈ ಬ್ಯಾಲೆನ್ಸಿಂಗ್ ಮಾಡುವ ಕಲೆ ಹಿಂದೆ ಇರುವ ಗುರುತ್ವಾಕರ್ಷಣಾ ಬಲ ಸಂಬಂಧಿ ನಿಯಮಗಳು ಹಾಗೂ ವಿಷಯಗಳು ಬಹಳ ವಿಸ್ತಾರವಾಗಿದ್ದು, ಅವುಗಳ ಬಗ್ಗೆ ತಿಳಿದಷ್ಟೂ ಇನ್ನಷ್ಟು ಪುಳಕಿತರಾಗುತ್ತೇವೆ.
ಚೆನ್ನೈನ ವ್ಯಕ್ತಿಯೊಬ್ಬರು ಎರಡು ಲೋಟಗಳಲ್ಲಿ ನೀರು ತುಂಬಿಕೊಂಡು, ಅವುಗಳಿಗೆ ಹಗ್ಗ ಕಟ್ಟಿ ಪೆಂಡ್ಯುಲಮ್ ನಂತೆ ಗಿರಕಿ ಹೊಡೆಸಿದ್ದಾರೆ. ಈ ವೇಳೆ ಒಂದೇ ಒಂದು ಹನಿ ನೀರೂ ಸಹ ಚೆಲ್ಲದೇ ಇದ್ದು ನೋಡುಗರನ್ನು ದಿಗ್ಭ್ರಮೆಯಾಗುವಂತೆ ಮಾಡಿದೆ. ಈ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.