ಕೊರೋನಾ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲಾದರೂ ಹೊರಗಡೆ ಹೋಗಿ ಸುತ್ತಾಡಿ ಬರಬೇಕೆಂದು ಬಹಳಷ್ಟು ಜನರಿಗೆ ಕಾತರವಾಗಿಬಿಟ್ಟಿದೆ. ಆದರೆ ಲಾಕ್ ಡೌನ್ ಕಾರಣ ಜನರು ಎಲ್ಲೂ ಆಚೆ ಹೋಗದಂತೆ ಆಗಿಬಿಟ್ಟಿದೆ.
ಇದೀಗ ಇಂಥ ಜನರಿಗೆಂದು ರಚನಾತ್ಮಕ ಐಡಿಯಾಗಳೊಂದಿಗೆ ಬಂದಿರುವ ತೈವಾನ್‌ನ ತಾಯ್ಪೇ ವಿಮಾನ ನಿಲ್ದಾಣವು, ಹುಸಿ ವಿಮಾನಯಾನದ ಅನುಭವವನ್ನು ಜನರಿಗೆ ಕೊಡಲು ಮುಂದಾಗಿದೆ.
ಪಾಸ್‌ಪೋರ್ಟ್ ಚೆಕಿಂಗ್, ಬೋರ್ಡಿಂಗ್ ಪಾಸ್, ಭದ್ರತಾ ತಪಾಸಣೆ ಸೇರಿದಂತೆ ಅನೇಕ ಪ್ರಕ್ರಿಯೆಗಳನ್ನು ಎಂದಿನಂತೆಯೇ ಸಹಜವಾಗಿ ಮಾಡುವುದಲ್ಲದೇ, ಜನರಿಗೆ ವಿಮಾನಗಳ ಒಳಗೆ ಹೋಗಲು ಅವಕಾಶ ನೀಡಲಾಗಿದೆ. ಈ ಫೇಕ್ ಫ್ಲೈಟ್‌ಗಳನ್ನು ಏರಲು ಸುಮಾರು 7000 ಜನರು ಅರ್ಜಿ ಹಾಕಿದ್ದು, ಅದರಲ್ಲಿ 60 ಮಂದಿಯನ್ನು ಆರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಇಂಥ ಹುಸಿ ವಿಮಾನಗಳನ್ನು ವ್ಯವಸ್ಥೆ ಮಾಡಲಾಗುವುದು ಎನ್ನಲಾಗಿದೆ.
https://www.facebook.com/watch/live/?v=3059393370796009&ref=watch_permalink&t=0