alex Certify ನಿಮ್ಮ ಸ್ಮಾರ್ಟ್‌ ಫೋನ್‌ ನಲ್ಲಿ ತಪ್ಪದೇ ಇರಲಿ ಸರ್ಕಾರದ ಈ ‌ʼಆಪ್ಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಸ್ಮಾರ್ಟ್‌ ಫೋನ್‌ ನಲ್ಲಿ ತಪ್ಪದೇ ಇರಲಿ ಸರ್ಕಾರದ ಈ ‌ʼಆಪ್ಸ್ʼ

ಗಡಿ ತಂಟೆಗೆ ಬಂದಿದ್ದ ಚೀನಾಗೆ ಬುದ್ದಿ ಕಲಿಸಲು ಮುಂದಾಗಿರುವ ಕೇಂದ್ರ ಸರ್ಕಾರ 59 ಚೀನಾ ಆಪ್‌ ಗಳ ಮೇಲೆ ನಿಷೇಧ ಹೇರುವ ಮೂಲಕ ಆರ್ಥಿಕವಾಗಿ ಹೊಡೆತ ನೀಡಿದೆ. ಈಗ ಚೀನಾ ಆಪ್‌ ಗಳಿಗೆ ಪರ್ಯಾಯವಾಗಿ ಭಾರತೀಯ ಆಪ್‌ ಗಳನ್ನು ಸ್ಮಾರ್ಟ್‌ ಫೋನ್‌ ಬಳಕೆದಾರರು ಡೌನ್‌ ಲೋಡ್‌ ಮಾಡಿಕೊಳ್ಳುತ್ತಿದ್ದಾರೆ.

ಆದರೆ ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ಉಪಯೋಗಕಾರಿಯಾಗಿರುವ ಸರ್ಕಾರದ ಬಹಳಷ್ಟು ಆಪ್‌ ಗಳನ್ನು ಡೌನ್‌ ಲೋಡ್‌ ಮಾಡಿಕೊಳ್ಳಲು ಬಳಕೆದಾರರು ಮುಂದಾಗುವುದಿಲ್ಲ. ಇದಕ್ಕೆ ಮಾಹಿತಿ ಕೊರತೆಯೂ ಕಾರಣವಾಗಿರುವುದು. ಹೀಗಾಗಿ ಸಾರ್ವಜನಿಕರಿಗೆ ಅನುಕೂಲಕರವಾಗಿರುವ ಆಪ್‌ ಗಳ ಪಟ್ಟಿ ಇಲ್ಲಿದೆ.

ಡಿಜಿಟಲ್‌ ವಹಿವಾಟು ಉತ್ತೇಜನ ಮಾಡುವ ಸಲುವಾಗಿ ಸರ್ಕಾರ ಭೀಮ್‌ ಆಪ್‌ ಬಿಡುಗಡೆ ಮಾಡಿದ್ದು, ಇದನ್ನು ಬಹಳಷ್ಟು ಮಂದಿ ಬಳಸುತ್ತಾರೆ. ಅದೇ ರೀತಿ ಕೊರೊನಾ ವೈರಸ್‌ ಕಾರಣಕ್ಕಾಗಿ ಬಿಡುಗಡೆಯಾಗಿರುವ ಆರೋಗ್ಯ ಸೇತು ಆಪ್‌ ಡೌನ್‌ ಲೋಡ್‌ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ಇನ್ನು ಆಧಾರ್‌, ಪಾನ್‌ ಕಾರ್ಡ್‌ ಡ್ರೈವಿಂಗ್‌ ಲೈಸೆನ್ಸ್‌ ಗಳನ್ನು ಸದಾ ಕಾಲ ಕೊಂಡೊಯ್ಯುವ ಬದಲು ಡಿಜಿ ಲಾಕರ್‌ ಆಪ್‌ ಮೂಲಕ ಸಂರಕ್ಷಿಸಿಟ್ಟುಕೊಳ್ಳಬಹುದಾಗಿದೆ. ರೈಲ್ವೇ ಇಲಾಖೆಯ ಐ.ಆರ್.ಸಿ.ಟಿ.ಸಿ. ಆಪ್‌ ಕೂಡಾ ಪ್ರಯಾಣಿಕರಿಗೆ ಅನುಕೂಲಕರ. ಮಹಿಳೆಯರ ಸುರಕ್ಷತೆಗಾಗಿ ಇರುವ 112 App ಡೌನ್‌ ಲೋಡ್‌ ಮಾಡಿಕೊಳ್ಳುವುದು ಒಳ್ಳೆಯದು.

ಸ್ಟಾರ್ಟ್‌ ಅಪ್‌ ಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದ್ದು, ಇದರ ಮಾಹಿತಿ ತಿಳಿದುಕೊಳ್ಳಲು ಸ್ಟಾರ್ಟ್‌ ಅಪ್‌ ಇಂಡಿಯಾ ಇದೆ. ಹಾಗೇ ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗುವ ಸಲುವಾಗಿ ಭಾರತ್‌ ಕೀ ವೀರ್‌ ಆಪ್‌ ಇದೆ. ಸರ್ಕಾರದ ಸ್ಕಾಲರ್‌ ಶಿಪ್‌ ಮಾಹಿತಿ ತಿಳಿಯುವ ಸಲುವಾಗಿ ವಿದ್ಯಾರ್ಥಿಗಳಿಗಾಗಿ National Scholarships Portal ಡೌನ್‌ ಲೋಡ್‌ ಅತಿ ಮುಖ್ಯ. ಇನ್ನು ಓಟರ್‌ ಐಡಿ ಮಾಹಿತಿಗಾಗಿ ಕೇಂದ್ರ ಚುನಾವಣಾ ಆಯೋಗದ ವೋಟರ್‌ ಹೆಲ್ಪ್‌ ಲೈನ್‌ ಡೌನ್‌ ಲೋಡ್‌ ಅವಶ್ಯಕವಾಗಿದೆ.

ಸರ್ಕಾರಕ್ಕೆ ಸಲಹೆ, ಸೂಚನೆಗಳನ್ನು ನೀಡುವ ಸಲುವಾಗಿ MyGov ಆಪ್‌ ಇದ್ದೇ ಇದೆ. ಕ್ರೀಡೆ ಕುರಿತ ಮಾಹಿತಿಗಾಗಿ Khelo India, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗಾಗಿ ePathshala, ಪಾಸ್‌ ಪೋರ್ಟ್‌ ಕುರಿತ ಮಾಹಿತಿಗಾಗಿ mPassport, ಆಧಾರ್‌ ಕುರಿತ ಅಪ್‌ ಡೇಟ್‌ ಗಾಗಿ mAadhaar, ಡ್ರೈವಿಂಗ್‌ ಲೈಸೆನ್ಸ್‌ ಸೇರಿದಂತೆ ವಾಹನ ಕುರಿತಾದ ಅಪ್‌ ಡೇಟ್‌ ಗಾಗಿ mParivahan, ಕೃಷಿಕರಿಗಾಗಿ Kisan Suvidha, ಪ್ರವಾಸಿಗರ ಅನುಕೂಲಕ್ಕಾಗಿ Incredible India, ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಪೊಲೀಸ್‌ ನೆರವಿಗಾಗಿ Indian Police on Call, ಯೋಗದ ಕುರಿತ ಮಾಹಿತಿಗಾಗಿ Yoga locator ಆಪ್‌ ಡೌನ್‌ ಲೋಡ್‌ ಮಾಡಿಕೊಂಡರೆ ಅನುಕೂಲವಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...