ದೇಶದ ಅತಿ ಉದ್ದದ ರೈಲಿನ ಪ್ರಯೋಗಾರ್ಥ ಸಂಚಾರ ಯಶಸ್ವಿ 04-07-2020 6:57AM IST / No Comments / Posted In: Business, Latest News, India ದೇಶದಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರ ಮಧ್ಯೆ ನಡೆದ ಅತಿ ಉದ್ದದ ರೈಲಿನ ಪ್ರಯೋಗಾರ್ಥ ಸಂಚಾರ ಯಶಸ್ವಿಯಾಗಿದೆ. ಹೌದು, ಭಾರತೀಯ ರೈಲ್ವೆ ಇಲಾಖೆ 251 ಬೋಗಿಗಳನ್ನು ಅಳವಡಿಸಲಾಗಿರುವ ಬರೋಬ್ಬರಿ 2.8 ಕಿಲೋಮೀಟರ್ ಉದ್ದದ ರೈಲಿನ ಸಂಚಾರವನ್ನು ಯಶಸ್ವಿಯಾಗಿ ನಡೆಸಿದೆ. ‘ಶೇಷ ನಾಗ’ ಹೆಸರಿನ ಈ ರೈಲು ನಾಗಪುರದಿಂದ ಕೊರ್ಬಾ ನಡುವಿನ ಹಳಿಯಲ್ಲಿ 4 ಎಲೆಕ್ಟ್ರಿಕ್ ಲೋಕೋಮೋಟಿವ್ ಸಹಾಯದಿಂದ ಯಶಸ್ವಿಯಾಗಿ ಸಂಚರಿಸಿದೆ. ಮುಂದಿನ ದಿನಗಳಲ್ಲಿ ಈ ರೈಲು ಹಳಿಗೆ ಇಳಿಯುವ ಸಾಧ್ಯತೆ ಇದೆ.