ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ -1 ಬಿ ವೀಸಾದಲ್ಲಿ ಬದಲಾವಣೆ ಮಾಡಿದ್ದಾರೆ. ಇದ್ರಿಂದಾಗಿ ಭಾರತೀಯ ಮೂಲದ ಕುಟುಂಬವೊಂದು ಬೇರೆ ವಾಸ ಮಾಡುವಂತಾಗಿದೆ.
ಕರಣ್ ಭಾರತದ ಪ್ರಜೆ. ಮಾರ್ಚ್ ನಲ್ಲಿ ತಂದೆ ಸಾವನ್ನಪ್ಪಿದ್ದ ಕಾರಣ ಭಾರತಕ್ಕೆ ಬಂದಿದ್ದರು. ಪತ್ನಿ ಹಾಗೂ ಐದು ವರ್ಷದ ಮಗು ಅಮೆರಿಕಾದಲ್ಲಿದ್ದು, ಟ್ರಂಪ್ ಹೊಸ ನೀತಿಯಿಂದಾಗಿ ಕರಣ್ ಗೆ ಅಮೆರಿಕಾಕ್ಕೆ ವಾಪಸ್ ಹೋಗಲು ಆಗ್ತಿಲ್ಲ.
ಈ ಬಗ್ಗೆ ಕರಣ್ ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡಿದ್ದಾರೆ. ಐಟಿ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡ್ತಿರುವ ಕರಣ್, ನನ್ನಂತೆ ಅನೇಕರು ಸಂಕಷ್ಟದಲ್ಲಿದ್ದಾರೆ. ಅಮೆರಿಕಾದಲ್ಲಿ ಕೆಲಸ ಮಾಡುವ ಕೆಲ ಭಾರತೀಯರು ಇಲ್ಲಿ ಸಿಕ್ಕಿಬಿದ್ದಿದ್ದಾರೆ. ಭಾರತೀಯ ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದು, ಯಾವುದೇ ನೆರವು ಸಿಕ್ಕಿಲ್ಲವೆಂದು ಕರಣ್ ಹೇಳಿದ್ದಾನೆ.
ಅಲ್ಲಿರುವ ಮಗಳ ಆರೋಗ್ಯ ಹದಗೆಟ್ಟಿದ್ದು, ಯಾವಾಗ ಅಮೆರಿಕಾಕ್ಕೆ ವಾಪಸ್ ಬರ್ತಿಯಾ ಎಂದು ಮಗಳು ಪ್ರತಿದಿನ ಕೇಳ್ತಿದ್ದಾಳಂತೆ. ಇದು ಮತ್ತಷ್ಟು ನೋವು ತಂದಿದೆ ಎಂದು ಕರಣ್ ಹೇಳಿದ್ದಾನೆ. 2010ರಲ್ಲಿಯೇ ಅಮೆರಿಕಾಕ್ಕೆ ಹೋಗಿರುವ ಕರಣ್ ಅಲ್ಲಿ ಮನೆ, ಭೂಮಿ ಹೊಂದಿದ್ದಾರೆ. ಹಳೆ ವೀಸಾಕ್ಕೆ ಈ ನೀತಿ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.