ಹರ್ಪೆಟೋರಿಯಸ್ ಪಿಲಿ ಎಂದು ಕರೆಯಲ್ಪಡುವ ಕೀಲ್ಬ್ಯಾಕ್ ಹಾವನ್ನು ಅಸ್ಸಾಂ ಮತ್ತು ಅರುಣಾಚಲ ಗಡಿ ಪ್ರದೇಶದಲ್ಲಿ ಪತ್ತೆ ಮಾಡಲಾಗಿದೆ, ಇದನ್ನು 129 ವರ್ಷಗಳ ಬಳಿಕ ಗಮನಿಸಲಾಗಿದೆ ಎಂಬುದು ವಿಶೇಷ.
ಹಾವಿನ ಗುರುತನ್ನು ದೃಢೀಕರಿಸಲು ಲಂಡನ್ ನ್ಯಾಷನಲ್ ಹಿಸ್ಟರಿ ಮ್ಯೂಸಿಯಂನೊಂದಿಗೆ ಸಂವಹನ ಮಾಡಲಾಗಿತ್ತು, ಅಲ್ಲಿ ಹಾವಿನ ಮೂಲ ಮಾದರಿಯನ್ನು ಹಾಗೆ ಇಡಲಾಗಿದೆ.
1891ರಲ್ಲಿ ಬ್ರಿಟಿಷ್ ಟೀ ಪ್ಲಾಂಟರ್ ಸ್ಯಾಮ್ಯುಯಲ್ ಎಡ್ವರ್ಡ್ ಪಿನ್ ಅವರು ಅಸ್ಸಾಂನ ಶಿವಸಾಗರ ಜಿಲ್ಲೆಯಿಂದ ಹಾವಿನ ಮಾದರಿಗಳನ್ನು ಸಂಗ್ರಹಿಸಿದ್ದರು. ಒಂದನ್ನು ಕೋಲ್ಕತ್ತಾದ ಜಿಯೋಲಜಿಕಲ್ ಸರ್ವೆ ಆಫ್ ಇಂಡಿಯಾದಲ್ಲೂ ಮತ್ತೊಂದನ್ನು ಲಂಡನ್ ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಸಂಗ್ರಹಿಸಿಡಲಾಗಿತ್ತು.
2018ರಲ್ಲಿ ವೈರ್ಲೆಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ವಿಜ್ಞಾನಿಗಳ ತಂಡವು ಈ ಹಾವಿನ ಬಗ್ಗೆ ಮಾಹಿತಿ ಕಂಡುಕೊಂಡಿದೆ. ಬಳಿಕ ದೀರ್ಘಕಾಲ ಕಾಣಿಸಿಕೊಳ್ಳದ ಈ ಹಾವಿನ ವಿವರಗಳನ್ನು ಅಂತರಾಷ್ಟ್ರೀಯ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. ಈ ಹಾವು ಕಾಡಿನೊಳಗಿನ ಗದ್ದೆಯಲ್ಲಿ ಕಾಣಿಸಿದ್ದು, ಇದು ಅಳಿವಿನಂಚಿನಲ್ಲಿದೆ ಎಂಬುದು ತಿಳಿದ ಮೇಲೆ ಮಾಹಿತಿ ಕಲೆ ಹಾಕಿ ಲಂಡನ್ ನ ನ್ಯಾಷನಲ್ ಹಿಸ್ಟರಿ ಮ್ಯೂಸಿಯಂ ನೊಂದಿಗೆ ಸಂಪರ್ಕ ಸಾಧಿಸಿ ತಿಳಿಸಲಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
https://www.instagram.com/p/CCAZqQVAAw0/?utm_source=ig_embed