ಒಡಿಶಾದ ಹಳ್ಳಿಯಿಂದ ಆಶ್ಚರ್ಯಕರ ಘಟನೆ ನಡೆದಿದೆ. ಮಲ್ಕಂಗಿರಿ ಜಿಲ್ಲೆಯ ಕಲ್ಕಪಲ್ಲಿ ಗ್ರಾಮದಲ್ಲಿ ಜನರು ಮೊಸಳೆಯನ್ನು ಹಿಡಿದು ಕೊಂದು ತಿಂದಿದ್ದಾರೆ. ಈ ಸಂಪೂರ್ಣ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ತಿಂದ ಜನರನ್ನು ಹುಡುಕುತ್ತಿದ್ದಾರೆ. ಸ್ಥಳೀಯ ಮೂಲಗಳ ಪ್ರಕಾರ, ಗ್ರಾಮಸ್ಥರು 10 ಅಡಿ ಎತ್ತರದ ಮೊಸಳೆಯನ್ನು ಹಿಡಿದು ಹಗ್ಗದಿಂದ ಕಟ್ಟಿ ಹಳ್ಳಿಯೊಳಗೆ ತಂದರು. ಇದರ ನಂತರ ಜನರು ಮೊಸಳೆಯನ್ನು ತೀಕ್ಷ್ಣವಾದ ಆಯುಧಗಳಿಂದ ಕೊಂದು ಅದನ್ನು ಮರಕ್ಕೆ ನೇತು ಹಾಕಿದ್ದಾರೆ. ನಂತ್ರ ತುಂಡುಗಳನ್ನಾಗಿ ಕತ್ತರಿಸಿ ಗ್ರಾಮಸ್ಥರಿಗೆ ಹಂಚಿದ್ದಾರೆ.
ಮೂಲಗಳ ಪ್ರಕಾರ, ಮೊಸಳೆ ಆಗಾಗ ಗ್ರಾಮಕ್ಕೆ ಬಂದು ಹಸು ಮತ್ತು ಮೇಕೆಗಳನ್ನು ತಿನ್ನುತ್ತಿತ್ತಂತೆ. ಗ್ರಾಮಸ್ಥರ ಮೇಲೂ ದಾಳಿ ನಡೆಸಿತ್ತಂತೆ. ಹಾಗಾಗಿ ಮೊಸಳೆ ಹಿಡಿದಿದ್ದಾಗಿ ಸ್ಥಳೀಯರು ಹೇಳಿದ್ದಾರೆ.