ಕೊರೊನಾ ಮಹಾಮಾರಿಯಿಂದಾಗಿ ಜೀವದ ಜೊತೆ ಜೀವನವೂ ಬೀದಿಗೆ ಬಿದ್ದಿದೆ. ಅದೆಷ್ಟೊ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇನ್ನೂ ಅನೇಕ ಕಂಪನಿಗಳಲ್ಲಿ ಕೆಲಸದಿಂದ ನೌಕರರನ್ನು ಕಿತ್ತು ಹಾಕುವ ಪ್ರಕ್ರಿಯೆ ಮುಂದುವರೆದಿದೆ. ಇದೀಗ ಅಮೆರಿಕ ಮೂಲದ ಮಾಹಿತಿ ತಂತ್ರಜ್ಞಾನ ಸಂಸ್ಥೆ ಕಾಗ್ನಿಜೆಂಟ್ನಲ್ಲೂ ಇದೇ ಕಾರ್ಯ ಮುಂದುವರೆದಿದೆ.
ಹೌದು, ಈ ಸಂಸ್ಥೆಯ ಶಾಖೆಗಳು ಭಾರತದಾದ್ಯಂತ ಇವೆ. ಎಲ್ಲಾ ಶಾಖೆಗಳು ಸೇರಿದಂತೆ ಸುಮಾರು 18 ಸಾವಿರ ಉದ್ಯೋಗಿಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಲು ಕಂಪನಿ ಆಡಳಿತ ಮಂಡಳಿ ಒತ್ತಡ ಹೇರುತ್ತಿದೆಯಂತೆ. ಇಂತಹ ಸಮಯದಲ್ಲಿ ನಮ್ಮನ್ನು ಕೆಲಸದಿಂದ ತೆಗೆದರೆ ಹೇಗೆ ಎನ್ನುತ್ತಿದ್ದಾರೆ ಈ ಕಂಪನಿ ಉದ್ಯೋಗಿಗಳು. ಈ ವಿಚಾರವಾಗಿ ಎಲ್ಲಾ ಕಾಗ್ನಿಜೆಂಟ್ ಉದ್ಯೋಗಿಗಳಿಗೆ ಕರೆ ನೀಡುವ ಅಭಿಯಾನ ಆರಂಭಿಸಲಾಗಿದೆ.
ಇನ್ನು ಕಂಪನಿಯ ಈ ಧೋರಣೆಯನ್ನು ಖಂಡಿಸಿ ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ದೂರು ಸಲ್ಲಿಸಲು ನೌಕರರು ಸಿದ್ದರಾಗಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿ ಉದ್ಯೋಗಿಗಳಿಗೆ ರಾಜೀನಾಮೆ ನೀಡಲು ಹೇಳುವುದು ಕಾರ್ಮಿಕ ಕಾನೂನಿಗೆ ವಿರುದ್ಧವಾಗಿದೆ.