ಚೀನಾದ ಟಿಕ್ ಟಾಕ್ ಅಪ್ಲಿಕೇಷನ್ ಬ್ಯಾನ್ ಆದ್ಮೇಲೆ ಭಾರತೀಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಟಿಕ್ ಟಾಕ್ ಮೇಲೆ ನಿಷೇಧ ಹೇರ್ತಿದ್ದಂತೆ ಮತ್ತೊಂದು ಅಪ್ಲಿಕೇಷನ್ ಜನಪ್ರಿಯತೆ ಪಡೆದಿದೆ. ಮೊಜ್ ಹೆಸರಿನ ಅಪ್ಲಿಕೇಷನ್ ಜನರನ್ನು ಸೆಳೆದಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇದು ಲಭ್ಯವಿದೆ.
ಕಳೆದ ಮೂರ್ನಾಲ್ಕು ದಿನಗಳಲ್ಲಿ ಮೊಜ್ ಅಪ್ಲಿಕೇಷನ್ ಡೌನ್ಲೋಡ್ ಸಂಖ್ಯೆ ದುಪ್ಪಟ್ಟಾಗಿದೆ. ಕನ್ನಡ ಸೇರಿದಂತೆ 15 ಭಾಷೆಯಲ್ಲಿ ಅಪ್ಲಿಕೇಷನ್ ಲಭ್ಯವಿದೆ. ಭಾರತೀಯ ಭಾಷೆ ಮಾತ್ರ ಲಭ್ಯವಿದ್ದು, ಇಂಗ್ಲೀಷ್ ಗೂ ಇಲ್ಲಿ ಅವಕಾಶ ನೀಡಿಲ್ಲ.
ಮೊಜ್ ಒಂದು ಚಿಕ್ಕ ವಿಡಿಯೋ ಹಂಚಿಕೆ ಅಪ್ಲಿಕೇಷನ್ ಆಗಿದೆ. ಇದನ್ನು ಭಾರತದ ಕಂಪನಿ ನಿರ್ಮಿಸಿದೆ. 15 ಸೆಕೆಂಡ್ ನ ಈ ವಿಡಿಯೋವನ್ನು ಬೇರೆಯವರು ನೋಡಬಹುದು. ಶೇರ್ ಮಾಡಬಹುದು.