ವರ್ಕ್ ಫ್ರಂ ಹೋಂ ಒಂದು ಸಾಹಸವೇ ಸರಿ. ಅದರಲ್ಲೂ ಲೈವ್ ರಿಪೋರ್ಟ್ ಮಾಡುವ ಟಿವಿ ವರದಿಗಾರರಿಗೆ ಇದೊಂದು ಸವಾಲು.
ವರ್ಕ್ ಫ್ರಂ ಹೋಂ ಲೈವ್ ವರದಿಗಾರಿಕೆಯ ಸಂದರ್ಭದಲ್ಲಿ ಟಿವಿ ಸಂಪಾದಕಿಯೊಬ್ಬಳ ಮಗ ಬಿಸ್ಕತ್ಗಾಗಿ ಆಕೆಯನ್ನು ಪೀಡಿಸಿದ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.
ಸ್ಕೈ ನ್ಯೂಸ್ನ ವಿದೇಶಿ ವಿದ್ಯಮಾನಗಳ ಸಂಪಾದಕಿ ಡೆಬ್ರಾ ಹೈನೆಸ್ ಅವರು ತಮ್ಮ ಮನೆಯ ಕೋಣೆಯಲ್ಲಿ ಕುಳಿತು ಜೂಮ್ ಆ್ಯಪ್ ಮೂಲಕ ಸ್ಟುಡಿಯೋದಲ್ಲಿದ್ದ ನಿರೂಪಕ ಮಾರ್ಕ್ ಆಸ್ಟಿನ್ ಜತೆ ಚರ್ಚೆ ನಡೆಸಿದ್ದರು. ಲೈವ್ನಲ್ಲಿ ಇಬ್ಬರ ಮಾತುಕತೆ ಪ್ರಸಾರವಾಗುತ್ತಿತ್ತು.
ಅಕೆ ‘ಡೇವಿಡ್ ಕೆಮರೂನ್ ವಾಸ್ ಟಾಕಿಂಗ್ ಎಬೌಟ್ …..’ಎಂದು ಹೇಳುತ್ತಿದ್ದಂತೆ ಕೋಣೆಯ ಒಳಗೆ ಪ್ರವೇಶಿಸಿದ ಡೆಬ್ರಾ ಅವರ ಪುಟ್ಟ ಮಗ ತನಗೆ ಮೂರು ಬಿಸ್ಕೇಟ್ ಕೊಡುವಂತೆ ಆಕೆಯನ್ನು ಕೇಳಲಾರಂಭಿಸಿದ. ಆಕೆ ‘ಐ ಎಂ ಸಾರಿ ಮೈ ಸನ್ ಈಸ್ ಕಮಿಂಗ್ (ಕ್ಷಮಿಸಿ ನನ್ನ ಮಗ ಬಂದ)’ ಎಂದು ಲೈವ್ ನಲ್ಲಿ ಕ್ಷಮೆ ಕೇಳಿದ್ದಾರೆ.
ಡೆಬ್ರಾ ಅವರು ಪೇಚಿಗೆ ಸಿಲುಕಿದ್ದು, ಗೊತ್ತಾಗುತ್ತಿದ್ದಂತೆ ಅತ್ತ ಸ್ಟುಡಿಯೋದಲ್ಲಿದ್ದ ನಿರೂಪಕ ಮಾರ್ಕ್ ಆಸ್ಟಿನ್ ಚರ್ಚೆಯನ್ನು ಅಲ್ಲಿಗೆ ತುಂಡರಿಸಿದ್ದಾರೆ. ವರ್ಕ್ ಫ್ರಂ ಹೋಂನಲ್ಲಿ ಇಂಥ ಘಟನೆಗಳಾಗುತ್ತವೆ ಎನ್ನುತ್ತ ಬೇರೆ ವಿಡಿಯೋ ಹಾಕಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಆದರೆ, ಕೆಲವೇ ಹೊತ್ತಿನಲ್ಲಿ ವಿಡಿಯೋ ವೈರಲ್ ಆಗಿದೆ.
‘ಈ ವಿಡಿಯೋ ಸ್ಕೈ ನ್ಯೂಸ್ನಲ್ಲಿ ಬಂದ ಬಳಿಕ ಅಮ್ಮ ಮಗನಿಗೆ ಮೂರು ಬಿಸ್ಕತ್ ಕೊಡಲೇಬೇಕಾಗಿದೆ’ ಎಂದು ಒಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ಬರೆದಿದ್ದಾರೆ. ಅವನಿಗೆ ಇಡೀ ಪ್ಯಾಕೆಟ್ ಬಿಸ್ಕತ್ ಕೊಟ್ಟುಬಿಡಿ ಎಂದು ಇನ್ನೊಬ್ಬರು ಡೆಬ್ರಾ ಅವರಿಗೆ ಸಲಹೆ ನೀಡಿದ್ದಾರೆ.
https://www.youtube.com/watch?time_continue=3&v=lqY2ed_FVdg&feature=emb_logo