BIG NEWS: ರಷ್ಯಾದಿಂದ 33 ಫೈಟರ್ ವಿಮಾನ ಖರೀದಿಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್ 02-07-2020 5:47PM IST / No Comments / Posted In: Latest News, India ಭಾರತ – ಚೀನಾ ಗಡಿಯಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ತಲೆದೋರಿರುವ ಸಂದರ್ಭದಲ್ಲಿ ಅತ್ತ ಪಾಕಿಸ್ತಾನ ಕೂಡಾ ಗಡಿಯಲ್ಲಿ ತನ್ನ ಸೈನಿಕರ ಜಮಾವಣೆ ಮಾಡುತ್ತಿದೆ. ಇದರ ಮಧ್ಯೆ ಕೇಂದ್ರ ರಕ್ಷಣಾ ಸಚಿವಾಲಯ ಮತ್ತಷ್ಟು ಶಸ್ತ್ರಾಸ್ತ್ರ ಖರೀದಿಗೆ ಒಪ್ಪಿಗೆ ನೀಡುವ ಮೂಲಕ ಬಲವರ್ಧನೆಗೆ ಮುಂದಾಗಿದೆ. ರಷ್ಯಾದಿಂದ 33 ಹೊಸ ಫೈಟರ್ ಜೆಟ್ ವಿಮಾನಗಳು, 12 Su-30MKIs and 21 MiG-29 ಜೊತೆಗೆ ಪ್ರಸ್ತುತ ಸೇನೆ ಬಳಿ ಇರುವ MiG-29 ವಿಮಾನಗಳ ಉನ್ನತೀಕರಣಕ್ಕೆ ಸಮ್ಮತಿ ಸೂಚಿಸಲಾಗಿದೆ. ಈ ಒಪ್ಪಂದದ ಮೌಲ್ಯ 18,148 ಕೋಟಿ ರೂಪಾಯಿಗಳಾಗಿದ್ದು, ಭಾರತ ಸೇನೆ ಮುಂದಿನ ದಿನಗಳಲ್ಲಿ ಇವುಗಳ ಸೇರ್ಪಡೆಯಿಂದ ಮತ್ತಷ್ಟು ಬಲಿಷ್ಟವಾಗಲಿದೆ. Defence Ministry approves proposal to acquire 33 new fighter aircraft from Russia including 12 Su-30MKIs and 21 MiG-29s along with upgradation of 59 existing MiG-29s. The total cost of these projects would be Rs 18,148 crores: Defence Ministry pic.twitter.com/nMvZvBn37Y — ANI (@ANI) July 2, 2020