ವಿಚ್ಛೇದನ ನೀಡಿದ ಕೆಲವೇ ದಿನಗಳಲ್ಲಿ ಹೊಸ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಹುಡುಕಿಕೊಳ್ಳುವುದು ಕಾಮನ್. ಇದೀಗ ಆಸ್ಟ್ರೇಲಿಯಾ ತಂಡದ ಮಾಜಿ ಬಲಗೈ ಬ್ಯಾಟ್ಸ್ಮನ್ ಕೂಡ ಅದೇ ಹಾದಿಯಲ್ಲಿದ್ದಾರೆ. ತಮ್ಮ ಪತ್ನಿಗೆ ವಿಚ್ಛೇದನ ನೀಡಿದ ಕೆಲವೇ ದಿನಗಳಲ್ಲಿ ಹೊಸ ಗರ್ಲ್ ಫ್ರೆಂಡ್ ಹುಡುಕಿಕೊಂಡಿದ್ದಾರೆ.
ಹೌದು, ಮೈಕಲ್ ಕ್ಲಾರ್ಕ್ ಇತ್ತೀಚೆಗೆ ನೂರಾರು ಕೋಟಿ ಜೀವನಾಂಶವನ್ನು ತಮ್ಮ ಪತ್ನಿಗೆ ನೀಡಿ ಅವರೊಟ್ಟಿಗಿನ ವಿವಾಹ ಸಂಬಂಧವನ್ನು ಮುರಿದುಕೊಂಡಿದ್ದರು. ಇದಾದ ಬಳಿಕ ಫ್ಯಾಷನ್ ಡಿಸೈನರ್ ಪಿಪ್ ಎಡ್ವರ್ಡ್ಸ್ ಜೊತೆ ಸಂಬಂಧ ಹೊಂದಿದ್ದಾರೆ.
ವಿಚ್ಛೇದನದ ಬಳಿಕ ಈ ಜೋಡಿ ಸಾಕಷ್ಟು ಕಡೆಗಳಲ್ಲಿ ಜೊತೆಯಾಗಿ ಓಡಾಡುತ್ತಿರುವುದು ಕಂಡು ಬಂದಿದ್ದು. ಈ ಜೋಡಿ ಜೊತೆಯಾಗಿ ಓಡಾಡುತ್ತಿರುವ ಫೋಟೊಗಳು ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿದ್ದವು. ಸಾಕಷ್ಟು ಮಂದಿ ಈ ಬಗ್ಗೆ ಮಾತನಾಡಿದ್ದರು. ಹೀಗಾಗಿ ಈ ಬಗ್ಗೆ ಮೌನ ಮುರಿದಿರುವ ಮೈಕಲ್ ಕ್ಲಾರ್ಕ್ ಈ ವಿಚಾರವನ್ನು ಸ್ವತಃ ಬಹಿರಂಗಪಡಿಸಿದ್ದಾರೆ ಎನ್ನಲಾಗುತ್ತಿದೆ.