ಐಶ್ವರ್ಯಾ ರೈ ತನ್ನ ನಟನೆ, ಸೌಂದರ್ಯದಿಂದ ಎಲ್ಲರ ಕಣ್ಮನ ಸೆಳೆದ ನಟಿ ಎಂದರೆ ತಪ್ಪಾಗಲಾರದು. ವರ್ಷವಾದರೂ ಒಂದಿನಿತೂ ಆ ಸೌಂದರ್ಯ ಮಾಸಿಲ್ಲ. ಇನ್ನು ಮಗಳು ಹುಟ್ಟಿದ ಮೇಲೂ ಸಾಕಷ್ಟು ವರ್ಕೌಟ್ ಮಾಡಿ ತನ್ನ ಫಿಟ್ ನೆಸ್ ಕಾಯ್ದುಕೊಂಡ ನಟಿ ಇವರು. ಐಶ್ವರ್ಯಾ ತನ್ನ ಸೌಂದರ್ಯ ಕಾಪಾಡಿಕೊಳ್ಳಲು ಏನೆಲ್ಲಾ ಟಿಪ್ಸ್ ಫಾಲೋ ಮಾಡುತ್ತಾರೆ ಗೊತ್ತೇ? ಇಲ್ಲಿದೆ ನೋಡಿ ಒಂದಷ್ಟು ಮಾಹಿತಿ.
ತನ್ನ ಆರೋಗ್ಯಕರವಾದ ತ್ವಚೆಗಾಗಿ ಸಾಕಷ್ಟು ನೀರು ಕುಡಿಯುತ್ತಾರಂತೆ ಈ ನಟಿ. ಇದೇ ಇವರ ಹೊಳೆಯುವ ಮುಖದ ಹಿಂದಿರುವ ಮುಖ್ಯವಾದ ಸೀಕ್ರೆಟ್ ಅಂತೆ.
ಇನ್ನು ಫುಡ್ ಎಂದರೆ ಸಾಕಷ್ಟು ಇಷ್ಟಪಡುವ ಈ ನಟಿ ಜಂಕ್ ಫುಡ್ ಸೇವಿಸಲ್ಲ. ಹಾಗೇ ಮನೆಯಲ್ಲಿ ಮಾಡಿದ ಅಡುಗೆಯನ್ನು ಹೆಚ್ಚಾಗಿ ಸೇವಿಸುತ್ತಾರಂತೆ. ಇದು ಇವರ ದೇಹವನ್ನು ಫಿಟ್ ಹಾಗೂ ಆರೋಗ್ಯಕರವಾಗಿ ಇಡುವುದಕ್ಕೆ ಸಹಾಯಕಾರಿಯಾಗಿದೆಯಂತೆ.
ಅರೋಮ ಥೆರಪಿ ಎಂದರೆ ಐಶ್ವರ್ಯಾ ರೈಗೆ ತುಂಬಾ ಇಷ್ಟವಂತೆ. ದೇಹದ ತ್ವಚೆಯ ಆರೋಗ್ಯಕಾಗಿ ಗಂಧದ ಎಣ್ಣೆಯನ್ನು ಬಳಸುತ್ತಾರಂತೆ. ಹಾಗೇ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಲ್ಯಾವೆಂಡರ್ ಎಣ್ಣೆಯನ್ನು ಬಳಸುತ್ತಾರಂತೆ. ಹಾಗೇ ರೋಸ್ಮೆರಿ,ಲೆಮನ್ ಗ್ರಾಸ್ ಎಣ್ಣೆ ಕೂಡ ಇವರ ಫೆವರೇಟ್.
ಇನ್ನು ಕೂದಲಿಗೆ ತೆಂಗಿನೆಣ್ಣೆ, ಬಾದಾಮಿ ಎಣ್ಣೆ, ಆಲೀವ್ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವ ಇವರು ನೈಸರ್ಗಿಕವಾದ ಹೇರ್ ಪ್ಯಾಕ್ ಅನ್ನೇ ಹೆಚ್ಚು ಬಳಸುತ್ತಾರೆ.
ಮುಖದ ಕಾಂತಿಗಾಗಿ ಕಡಲೆಹಿಟ್ಟು, ಹಾಲಿನ ಕೆನೆ ಉಪಯೋಗಿಸಿ ಪ್ಯಾಕ್ ಹಾಕಿಕೊಳ್ಳುತ್ತಾರೆ. ಹಾಗೇ ಮೊಸರು, ಅರಿಶಿನ, ಜೇನುತುಪ್ಪ ಮಿಕ್ಸ್ ಮಾಡಿ ಪ್ಯಾಕ್ ಹಚ್ಚಿಕೊಳ್ಳುವುದು ಕೂಡ ಇವರಿಗೆ ತುಂಬಾ ಇಷ್ಟವಂತೆ.