alex Certify ವಿಶಿಷ್ಟ ರೀತಿಯಲ್ಲಿ ಚೀನಾ ಆಪ್‌ ನಿಷೇಧವನ್ನು ಸ್ವಾಗತಿಸಿದ ‌ʼಅಮೂಲ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶಿಷ್ಟ ರೀತಿಯಲ್ಲಿ ಚೀನಾ ಆಪ್‌ ನಿಷೇಧವನ್ನು ಸ್ವಾಗತಿಸಿದ ‌ʼಅಮೂಲ್ʼ

ಲಡಾಕ್‌ ನ ಗಲ್ವಾನ್‌ ಕಣಿವೆಯಲ್ಲಿ ಭಾರತದ ಯೋಧರು ಹಾಗೂ ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ವೇಳೆ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಚೀನಾಕ್ಕೆ ನಮ್ಮ ಸೈನಿಕರು ದಿಟ್ಟ ಪ್ರತ್ಯುತ್ತರ ನೀಡಿದ್ದರ ಮಧ್ಯೆ ಕೇಂದ್ರ ಸರ್ಕಾರ, ಚೀನಾದ 59 ಆಪ್‌ ಗಳನ್ನು ನಿಷೇಧಿಸುವ ಮೂಲಕ ಆರ್ಥಿಕವಾಗಿ ಚೀನಾಗೆ ಪೆಟ್ಟು ನೀಡಿತ್ತು.

ಕೇಂದ್ರ ಸರ್ಕಾರ, ಟಿಕ್‌ ಟಾಕ್‌, ವಿ ಚಾಟ್‌ ಸೇರಿದಂತೆ ಚೀನಾದ 59 ಆಪ್‌ ಗಳ ಮೇಲೆ ನಿಷೇಧ ಹೇರಿರುವ ಕ್ರಮವನ್ನು ದೇಶವಾಸಿಗಳು ಸ್ವಾಗತಿಸಿದ್ದರು. ಅಲ್ಲದೇ ಇದಕ್ಕೂ ಮುನ್ನವೇ ಚೀನಾ ಉತ್ಪನ್ನ ಕೊಂಡುಕೊಳ್ಳುವುದಿಲ್ಲವೆಂದು ಹೇಳುವ ಮೂಲಕ ದೇಶ ಪ್ರೇಮ ಮೆರೆದಿದ್ದರು. ಇದೀಗ ದೇಶದ ಪ್ರಮುಖ ಹಾಲು ಉತ್ಪನ್ನ ತಯಾರಿಕಾ ಸಂಸ್ಥೆ ಅಮೂಲ್‌ ಕೂಡಾ ಕೇಂದ್ರ ಸರ್ಕಾರದ ತೀರ್ಮಾನವನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿದೆ.

ಈ ಹಿಂದೆಯೂ ಪ್ರಮುಖ ಸಂದರ್ಭಗಳಲ್ಲಿ ತನ್ನ ಉತ್ಪನ್ನದ ಚಿತ್ರಗಳ ಮೂಲಕವೇ ಸಂದೇಶ ರವಾನಿಸುತ್ತಿದ್ದ ಅಮೂಲ್‌ ಈಗ sTik-with-this-sTok ಜೊತೆಗೆ wechat ಎಂಬ ಡೂಡಲ್‌ ಕ್ರಿಯೇಟ್‌ ಮೂಲಕ ಪರೋಕ್ಷವಾಗಿ ಚೀನಾ ಆಪ್‌ ಗಳಿಗೆ ಟಾಂಗ್‌ ನೀಡಿದೆ. ಜೊತೆಗೆ New Delhi bans 59 Chinese apps ಎಂಬ ಬರಹವನ್ನೂ ನೀಡಿದೆ. ಅಮೂಲ್‌ ನ ಈ ಡೂಡಲ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕ್ರಿಯಾಶೀಲತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.‌

— Amul.coop (@Amul_Coop) June 30, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...