ದಿನಾ ಒಂದೇ ರೀತಿ ಅಡುಗೆ, ಸ್ನ್ಯಾಕ್ಸ್ ತಿಂದು ಬೋರು ಅನಿಸದಾಗ ಈ ಸೋಯಾ ಚಂಕ್ಸ್ ಫ್ರೈ ಮಾಡಿಕೊಂಡು ಸವಿಯಿರಿ. ಮಾಡುವುದಕ್ಕೆ ಕಷ್ಟವಿಲ್ಲ. ಜತೆಗೆ ರುಚಿಕರವಾಗಿ ಕೂಡ ಇರುತ್ತದೆ.
ಬೇಕಾಗುವ ಸಾಮಗ್ರಿಗಳು:
ಸೋಯಾ ಚಂಕ್ಸ್ ಬೇಯಿಸಿದ್ದು – 2 ಕಪ್, ಖಾರದ ಪುಡಿ – 2 ಟೀ ಸ್ಪೂನ್, ಗರಂ ಮಸಾಲ – 1 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಕರಿಬೇವು – 10 ಎಸಳು, ಕೊತ್ತಂಬರಿಸೊಪ್ಪು – ಒಂದು ಹಿಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಸ್ಪೂನ್, ಅಕ್ಕಿ ಹಿಟ್ಟು – 4ಟೇಬಲ್ ಸ್ಪೂನ್, ಎಣ್ಣೆ – ಕರಿಯಲು ಬೇಕಾಗುವಷ್ಟು.
ಮಾಡುವ ವಿಧಾನ:
ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಬೇಯಿಸಿದ ಸೋಯಾ ಚಂಕ್ಸ್ ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಉಪ್ಪು, ಖಾರದಪುಡಿ, ಗರಂ ಮಸಾಲ ಶುಂಠಿ – ಬೆಳ್ಳುಳ್ಳಿ ಪೇಸ್ಟ್, ಕರಿಬೇವು, ಕೊತ್ತಂಬರಿಸೊಪ್ಪು, ಅಕ್ಕಿ ಹಿಟ್ಟು ಸೇರಿಸಿ ರುಬ್ಬಿಕೊಳ್ಳಿ. ಇದನ್ನು ಒಂದು ಬೌಲ್ ಗೆ ಹಾಕಿಕೊಂಡು ಚಿಕ್ಕ ಚಿಕ್ಕ ಉಂಡೆ ಕಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ.