alex Certify OMG…! ಕೋಲ್ಕತ್ತಾ‌ – ಲಂಡನ್‌ ನಡುವೆ ಸಂಚರಿಸುತ್ತಿತ್ತು ಬಸ್…!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG…! ಕೋಲ್ಕತ್ತಾ‌ – ಲಂಡನ್‌ ನಡುವೆ ಸಂಚರಿಸುತ್ತಿತ್ತು ಬಸ್…!!

ಇದೀಗ ಸಾಮಾಜಿಕ ಜಾಲತಾಣದಲ್ಲಿ ಥ್ರೋ ಬ್ಯಾಕ್ ಟ್ರೆಂಡ್ ನಡೆಯುತ್ತಿದೆ. ಹಳೆಯ ನೆನಪುಗಳನ್ನು ಮೆಲಕು ಹಾಕುವ ಕೆಲಸವಿದು. ಹಾಗೆಯೇ 1968 ರಲ್ಲಿದ್ದ ವಿಶ್ವದ ಅತಿ ದೀರ್ಘಾವಧಿ ಪ್ರಯಾಣ ಮಾಡುತ್ತಿದ್ದ ಬಸ್ ಮಾರ್ಗದಲ್ಲಿ ಸಂಚರಿಸಿದ್ದ ಆಲ್ಬರ್ಟ್ ಹೆಸರಿನ ಬಸ್ ಬಗ್ಗೆ ನೆಟ್ಟಿಗರು ಕುತೂಹಲದಿಂದ ಚರ್ಚಿಸಿದ್ದಾರೆ.

ಲಂಡನ್ ಮತ್ತು ಕೋಲ್ಕತ್ತಾದ ನಡುವೆ ಪ್ರಯಾಣಿಸುತ್ತಿದ್ದ ಬಸ್ ಪ್ರಯಾಣ ದರ 85 ಪೌಂಡ್ (7,889 ರೂ.) ಆಗಿತ್ತು. ಆಗಿನ ಕಾಲಕ್ಕೆ ಅದು ದುಬಾರಿ ದರ. 60ರ ದಶಕದ‌ಲ್ಲಿ ‘ಆಲ್ಬರ್ಟ್’ ಎಂಬ ಹೆಸರಿನ ಡಬಲ್ ಡೆಕ್ಕರ್ ಬಸ್ ಭಾರತ ಮತ್ತು ಯುಕೆ ನಡುವೆ 15 ಟ್ರಿಪ್‌ ಮತ್ತು ಲಂಡನ್ ಮತ್ತು ಸಿಡ್ನಿಯ ನಡುವೆ ನಾಲ್ಕು ಟ್ರಿಪ್‌ ಮಾಡಿತ್ತಂತೆ. ಲಂಡನ್‌ನ ವಿಕ್ಟೋರಿಯಾ ಕೋಚ್ ನಿಲ್ದಾಣದಲ್ಲಿ ಪ್ರಯಾಣಿಕರ ಚಿತ್ರ, ಮೊದಲ ಪ್ರಯಾಣದ ಸಂದರ್ಭದ ಚಿತ್ರ ವೈರಲ್ ಆಗಿದೆ.

21 ವರ್ಷಗಳ ಸೇವೆ ಮತ್ತು ಅಪಘಾತದ ನಂತರ ಈ ಬಸ್ ನ್ನು ಸಾರ್ವಜನಿಕ ಸೇವೆಗೆ ಬಳಸಲಿಲ್ಲ. ಬಳಿಕ ಬ್ರಿಟಿಷ್ ಪ್ರವಾಸಿಯೊಬ್ಬ ಅದನ್ನು ಖರೀದಿಸಿ ಮೊಬೈಲ್ ಹೋಂ ಆಗಿ ಬಳಸಿದ. ಹಾಗೆಯೇ ಆತ ಮತ್ತು 13 ಜನ ಸಿಡ್ನಿಯಿಂದ ಭಾರತದ ಮಾರ್ಗವಾಗಿ ಲಂಡನ್ ಗೆ 16 ಸಾವಿರ ಕಿಲೋಮೀಟರ್ ಪ್ರಯಾಣಿಸಿದ್ದರು.

https://twitter.com/RKDasgupta/status/1277694020916056064?ref_src=twsrc%5Etfw%7Ctwcamp%5Etweetembed%7Ctwterm%5E1277694020916056064%7Ctwgr%5E&ref_url=https%3A%2F%2Fwww.indiatimes.com%2Ftrending%2Fsocial-relevance%2Fbus-albert-london-kolkata-516851.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...