ಕೊರೊನಾ ಮಹಾಮಾರಿಗೆ ಒಂದು ಕಡೆ ಜೀವ ಬಲಿಯಾದರೆ, ಮತ್ತೊಂದು ಕಡೆ ಜೀವನ ಕೂಡ ಬೀದಿಗೆ ಬಿದ್ದಿದೆ. ಅದೆಷ್ಟೋ ಉದ್ಯಮಗಳು ಸುಧಾರಿಸಿಕೊಳ್ಳಲು ಸಾಧ್ಯವಾಗದೇ ನೆಲಕಚ್ಚಿ ಹೋಗುತ್ತಿವೆ. ಇದರಲ್ಲಿ ಹೋಟೆಲ್ ಉದ್ಯಮ ಕೂಡ ಒಂದು. ಕೊರೊನಾದಿಂದಾಗಿ ಹೋಟೆಲ್ ಮಾರಾಟ ಮಾಡಲು ಮಾಲೀಕರೊಬ್ಬರು ತೀರ್ಮಾನ ಮಾಡಿದ್ದಾರೆ.
ಹೌದು, ಲಾಕ್ ಡೌನ್ ನಿಂದಾಗಿ ಹೋಟೆಲ್ ಗಳು ತೆರೆದಿರಲಿಲ್ಲ. ಆದರೆ ಲಾಕ್ ಡೌನ್ ಸಡಿಲಿಕೆ ಮಾಡಿ ಹೋಟೆಲ್ ತೆರೆಯಲು ಅನುಮತಿ ನೀಡಲಾಗಿದ್ದರೂ ಗ್ರಾಹಕರು ಹೋಟೆಲ್ ಗೆ ಬರುತ್ತಿಲ್ಲ. ಇನ್ನು ಅನೇಕ ಹೋಟೆಲ್ ಗಳು ಬಾಗಿಲು ತೆರೆದಿಲ್ಲ. ಹಾಕಿದ ಬಂಡವಾಳ ವಾಪಸ್ ಬರದೇ ಇರೋದ್ರಿಂದ ಹೋಟೆಲ್ ಗಳನ್ನೇ ಮಾರಾಟ ಮಾಡೋದಿಕ್ಕೆ ಮಾಲೀಕರು ತಯಾರಾಗಿದ್ದಾರಂತೆ.
ಇದೀಗ ಬೆಂಗಳೂರಿನಲ್ಲಿ ಸುಮಾರು 21 ಸಾವಿರ ಹೋಟೆಲ್‌ಗಳಿದ್ದು ಅದರಲ್ಲಿ ಈಗ ಲಾಕ್‌ಡೌನ್ ಇಲ್ಲದಿದ್ದರೂ 2 ಸಾವಿರ ಹೋಟೆಲ್‌ಗಳನ್ನು ತೆರೆದಿಲ್ಲವಂತೆ. ಹೀಗಾಗಿ ಅನೇಕ ಹೋಟೆಲ್ ಮಾಲೀಕರು ನಷ್ಟ ಅನುಭವಿಸುತ್ತಿರೋದ್ರಿಂದ ಹೋಟೆಲ್ ಮಾರಾಟ ಮಾಡಲು ತೀರ್ಮಾನ ಮಾಡಲಾಗಿದೆಯಂತೆ.