alex Certify ʼಆರೋಗ್ಯʼಕರವಾದ ರಾಗಿ ಇಡ್ಲಿ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆರೋಗ್ಯʼಕರವಾದ ರಾಗಿ ಇಡ್ಲಿ ಮಾಡುವ ವಿಧಾನ

ಬೆಳಿಗ್ಗಿನ ತಿಂಡಿಗೆ ಮಾಡಿ ಆರೋಗ್ಯಕರವಾದ ಈ ರಾಗಿ ಇಡ್ಲಿ. ತುಂಬಾ ಮೆತ್ತಗಿರುತ್ತದೆ ಜತೆಗೆ ರಾಗಿ ಕೂಡ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಬೇಕಾಗುವ ಸಾಮಾಗ್ರಿಗಳು:

ರಾಗಿ ಹಿಟ್ಟು – 2 ಕಪ್, ಇಡ್ಲಿ ಅಕ್ಕಿ – 1 ಕಪ್, ಉದ್ದಿನಬೇಳೆ – 1/2 ಕಪ್, ಮೆಂತೆ ಕಾಳು – 2 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ನೀರು – ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:

ಮೊದಲಿಗೆ ಅಕ್ಕಿ ಬೇಳೆ, ಮೆಂತೆ ಕಾಳನ್ನು ನೆನೆಸಿ 2 ಗಂಟೆಗಳ ಕಾಲ ನೆನೆಸಿಡಿ. ನಂತರ ಇವೆಲ್ಲವನ್ನು ಒಟ್ಟು ಸೇರಿಸಿ ಗ್ರೈಂಡರ್ ನಲ್ಲಿ ನಯವಾಗಿ ರುಬ್ಬಿಕೊಳ್ಳಿ.

ಇದಕ್ಕೆ ಉಪ್ಪು ಹಾಗೂ ಬೇಕಾಗುವಷ್ಟು ನೀರು ಸೇರಿಸಿಕೊಳ್ಳಿ. ನಂತರ ರಾಗಿಹಿಟ್ಟು ಸೇರಿಸಿ ಮತ್ತೊಮ್ಮೆ ರುಬ್ಬಿಕೊಂಡು ಒಂದು ಪಾತ್ರೆಗೆ ತೆಗೆದುಕೊಳ್ಳಿ.

ರಾತ್ರಿಯಿಡೀ ಈ ಹಿಟ್ಟನ್ನು ಹಾಗೆಯೇ ಇಡಿ. ಬೆಳಿಗ್ಗೆ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇಡ್ಲಿ ತಟ್ಟೆಗೆ ಹಾಕಿ ಆವಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...