ಅಡುಗೆ ಮನೆಯಲ್ಲಿಯೇ ಸಾಕಷ್ಟು ಔಷಧಿಗಳಿವೆ. ಜೀರಿಗೆ, ಕೊತ್ತಂಬರಿ ಸೇರಿದಂತೆ ಅಗಸೆ ಬೀಜ ಕೂಡ ಆರೋಗ್ಯಕ್ಕೆ ಒಳ್ಳೆಯದು. ಅಗಸೆ ಬೀಜ ತಿನ್ನಲು ರುಚಿಕರ. ಇದ್ರಿಂದ ಸಾಕಷ್ಟು ಪ್ರಯೋಜನವಿದೆ.
ಅಗಸೆ ಬೀಜ ಹೃದಯಕ್ಕೆ ಒಳ್ಳೆಯದು. ಅದರಲ್ಲಿರುವ ಕರಗುವ ನಾರುಗಳು ದೇಹದಲ್ಲಿನ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ರಕ್ತದ ಹರಿವು ಸುಧಾರಿಸುತ್ತದೆ.
ಒಮೆಗಾ -3 ಅಗಸೆ ಬೀಜದಲ್ಲಿ ಸಾಕಷ್ಟು ಕಂಡು ಬರುತ್ತದೆ. ಇದು ರಕ್ತದ ಹರಿವನ್ನು ಸುಧಾರಿಸುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
ಅಗಸೆ ಬೀಜವು ದೇಹದ ಹೆಚ್ಚುವರಿ ಕೊಬ್ಬನ್ನು ಸಹ ಕಡಿಮೆ ಮಾಡುತ್ತದೆ. ತೂಕ ಇಳಿಸಲು ಇದರ ಸೇವನೆ ಮಾಡಬೇಕು.
ಅಗಸೆ ಬೀಜದಲ್ಲಿ ಇರುವ ಆಂಟಿ-ಆಕ್ಸಿಡೆಂಟ್ಗಳು ಮತ್ತು ಫೈಟೊಕೆಮಿಕಲ್ಗಳು ವಯಸ್ಸಾಗುವ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇದು ಚರ್ಮದ ಮೇಲೆ ಸುಕ್ಕುಗಳು ಮತ್ತು ಬಿಗಿತವನ್ನು ತಡೆಯುತ್ತದೆ.
ಸಂಧಿವಾತ, ಆಸ್ತಮಾ, ಮಧುಮೇಹ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುತ್ತದೆ. ಕರುಳಿನ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.