alex Certify ‘ಕೊರೊನಾ’ ಭಯದಲ್ಲಿರುವವರಿಗೊಂದು ಖುಷಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಭಯದಲ್ಲಿರುವವರಿಗೊಂದು ಖುಷಿ ಸುದ್ದಿ

ಕೊರೊನಾ  ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಬ್ರಿಟನ್, ಚೀನಾ, ಅಮೆರಿಕ ಮತ್ತು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಡೆಯುತ್ತಿವೆ. ಈ ಸಾಂಕ್ರಾಮಿಕ ರೋಗಕ್ಕೆ ಮೊದಲ ಲಸಿಕೆಯನ್ನು ಯಾವ ದೇಶ ತಯಾರಿಸಲಿದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಈ ಮಧ್ಯೆ ಆಕ್ಸ್ಫರ್ಡ್‌ನ ಪ್ರಾಯೋಗಿಕ ಲಸಿಕೆ ತನ್ನ ಕ್ಲಿನಿಕಲ್ ಪ್ರಯೋಗದ ಅಂತಿಮ ಹಂತವನ್ನು ತಲುಪಿದೆ. ಇದನ್ನು ಭಾರತೀಯ ಕಂಪನಿಯೊಂದು ಉತ್ಪಾದಿಸಲಿದೆ ಎಂಬುದು ವಿಶೇಷ.

ಈ ಭಾರತೀಯ ಕಂಪನಿಯು ಜುಲೈ ವೇಳೆಗೆ ಲಕ್ಷಾಂತರ ಪ್ರಮಾಣದಲ್ಲಿ ಕೊರೊನಾ ಲಸಿಕೆ ತಯಾರಿಸಲಿದೆ. ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಆಕ್ಸ್ಫರ್ಡ್ ಲಸಿಕೆ ಉತ್ಪಾದಿಸುವ ಜವಾಬ್ದಾರಿಯನ್ನು ಹೊತ್ತಿದೆ. ಆಕ್ಸ್ಫರ್ಡ್ ಲಸಿಕೆ ಪ್ರಯೋಗದ ಮೊದಲ ಹಂತದ ಸಕಾರಾತ್ಮಕ ಫಲಿತಾಂಶದ ನಂತರ ಕಂಪನಿಯು 20-30 ಲಕ್ಷ ಡೋಸ್ ಲಸಿಕೆಗಳನ್ನು ತಯಾರಿಸಲಿದೆ ಎಂದು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್ ಜಾಧವ್ ಹೇಳಿದ್ದಾರೆ. ಅದೇ ಸಮಯದಲ್ಲಿ, ಎರಡನೇ-ಮೂರನೇ ಪ್ರಯೋಗ ಮುಗಿದ ನಂತರ ಅವುಗಳ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...