ಟೆಸ್ಲಾ ಕಂಪನಿಯ ಜಾಲತಾಣದ ಮೂಲಕ ಆನ್ಲೈನ್ ಖರೀದಿ ಮಾಡಲು ಮುಂದಾಗಿದ್ದ ಜರ್ಮನಿಯ ವ್ಯಕ್ತಿಯೊಬ್ಬರು, ತಾಂತ್ರಿಕ ದೋಷ ಉಂಟಾದ ಕಾರಣ ಒಂದೇ ಏಟಿಗೆ 28 ಟೆಸ್ಲಾ ವಾಹನಗಳಿಗೆ ಆರ್ಡರ್ ಮುಂದಿಟ್ಟಿದ್ದಾರೆ.
4.1 ದಶಲಕ್ಷ ಯೂರೋಗಳ (11.9 ಕೋಟಿ ರೂ.ಗಳ) ವೆಚ್ಚದಲ್ಲಿ, ಒಂದರ ಬದಲಿಗೆ 27 ಹೆಚ್ಚುವರಿ ಮಾಡೆಲ್ 3ಎಸ್ ವಾಹನಗಳಿಗೆ ಆರ್ಡರ್ ಮುಂದಿಟ್ಟ ಕಥೆಯನ್ನು ‘Ballon Man’ ಹೆಸರಿನ ರೆಡ್ಡಿಟ್ ಬಳಕೆದಾರರೊಬ್ಬರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದರೊಂದಿಗೆ ಪ್ರತಿಯೊಂದು ಕಾರಿನ ಮೇಲೂ ಸಹ ರೀಫಂಡ್ ಮಾಡಲಾಗದಂಥ 100 ಯೂರೋಗಳ ಚಾರ್ಜ್ ಸಹ ಸೇರಿ 2800 ಯೂರೋಗಳಷ್ಟು ದುಡ್ಡು ಸಹ ಕಡಿತಗೊಂಡಿತ್ತು. ಆದರೆ, ಟೆಸ್ಲಾಗೆ ಕರೆ ಮಾಡಿ, ಆಗಿದ್ದನ್ನು ವಿವರಿಸಿದ ಬಳಿಕ ಇಡೀಗ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಲಾಗಿದ್ದಲ್ಲದೇ, ಫ್ರೆಶ್ ಆಗಿ ಆರ್ಡರ್ ಮುಂದೆ ಇಡಲು ಸೂಚಿಸಲಾಗಿದೆ.