ನವದೆಹಲಿ: ಜುಲೈ 1 ರಿಂದ ಚಾರ್ ಧಾಮ್ ಯಾತ್ರೆ ಆರಂಭವಾಗಲಿದೆ. ಮೊದಲಿಗೆ ಉತ್ತರಾಖಂಡ್ ರಾಜ್ಯದವರಿಗೆ ಮಾತ್ರ ಯಾತ್ರೆಗೆ ಅವಕಾಶ ಇರುತ್ತದೆ. ಹೊರ ರಾಜ್ಯದವರಿಗೆ ಸದ್ಯಕ್ಕೆ ಯಾತ್ರೆಗೆ ಅವಕಾಶ ಇರುವುದಿಲ್ಲ.
ಕೇದಾರನಾಥ, ಬದರಿನಾಥ, ಗಂಗೋತ್ರಿ, ಯಮುನೋತ್ರಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಲು ಸ್ಥಳೀಯರಿಗೆ ಅವಕಾಶ ನೀಡಲಾಗಿದೆ.
ಈ 4 ಕ್ಷೇತ್ರಗಳ ದರ್ಶನವೇ ಚಾರ್ ಧಾಮ್ ಯಾತ್ರೆಯಾಗಿದ್ದು, ಉತ್ತರಾಖಂಡ್ ರಾಜ್ಯದಲ್ಲಿರುವ ಈ ನಾಲ್ಕು ಪುಣ್ಯಕ್ಷೇತ್ರಗಳಿಗೆ ಜುಲೈ 1 ರಿಂದ ಯಾತ್ರೆ ಆರಂಭವಾಗಲಿದೆ.