alex Certify ಕೊಳವೆ ಬಾವಿಗೆ ಬಿದ್ದ ಮೇಕೆಯನ್ನು ರಕ್ಷಿಸಿದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಳವೆ ಬಾವಿಗೆ ಬಿದ್ದ ಮೇಕೆಯನ್ನು ರಕ್ಷಿಸಿದ ವಿಡಿಯೋ ವೈರಲ್

ಕೊಳವೆ ಬಾವಿಯೊಂದಕ್ಕೆ ಬಿದ್ದ ಮೇಕೆ ಮರಿಯನ್ನು ಥೇಟ್ ದೇಶೀ ಶೈಲಿಯಲ್ಲಿ ಬಚಾವ್ ಮಾಡಲು ಮುಂದಾದ ನಾಲ್ವರ ಸಾಹಸವು ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಅಸ್ಸಾಂ ಪೊಲೀಸ್‌ನ ADGP ಹರ್ದಿ ಸಿಂಗ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಮೇಕೆ ಮರಿಯನ್ನು ರಕ್ಷಿಸಲು ಖುದ್ದು ಮುಂದಾಗುವ ಈ ನಾಲ್ವರ ಪೈಕಿ ಒಬ್ಬರು ತಾವೇ ಆ ಕೊಳವೆ ಬಾವಿಗೆ ತಮ್ಮ ಅರ್ಧಕ್ಕಿಂತ ಹೆಚ್ಚಿನ ಭಾಗದ ದೇಹವನ್ನು ಉಲ್ಟಾ ಒಳಗೆ ತೂರಿಸುತ್ತಾರೆ. ಈ ವೇಳೆ ಅವರ ಕಾಲುಗಳನ್ನು ಮಿಕ್ಕ ಮೂವರು ಹಿಡಿದುಕೊಳ್ಳುತ್ತಾರೆ.

ಕೊಳವೆ ಬಾವಿಯೊಳಗೆ ತೂರಿಕೊಂಡ ಈ ವ್ಯಕ್ತಿ ತನ್ನ ಕೈಗೆ ಮೇಕೆ ಸಿಕ್ಕಿದೆ ಎಂದು ಹೇಳುತ್ತಲೇ ಆತನನ್ನು ಮೇಲೆತ್ತುವ ಕೆಲಸವನ್ನು ಮಿಕ್ಕ ಮೂರು ಮಂದಿ ಮಾಡುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...