ಲಾಕ್ ಡೌನ್ ಸಂದರ್ಭದಲ್ಲಿ ಬಂದ ಕರೆಂಟ್ ಬಿಲ್ ನೋಡಿ ರಾಜ್ಯದ ಹಲವರು ಬೆಚ್ಚಿಬಿದ್ದಿದ್ದರು. ತಾವು ಈ ಮೊದಲಿನಂತೆ ವಿದ್ಯುತ್ ಬಳಕೆ ಮಾಡಿದರೂ ಸಹ ಬಿಲ್ ನಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಗ್ರಾಹಕರು ಆರೋಪಿಸಿದ್ದರು. ಆದರೆ ವಿದ್ಯುಚ್ಛಕ್ತಿ ಮಂಡಳಿ, ಲಾಕ್ಡೌನ್ ಸಮಯದಲ್ಲಿ ಎಲ್ಲರೂ ಮನೆಯಲ್ಲಿದ್ದರಿಂದ ವಿದ್ಯುತ್ ಬಳಕೆ ಹೆಚ್ಚಾಗಿದೆ. ಹೀಗಾಗಿ ಸಹಜವಾಗಿಯೇ ಹೆಚ್ಚಿನ ಮೊತ್ತದ ಬಿಲ್ ಬಂದಿದೆ ಎಂದು ಸಮಜಾಯಿಷಿ ನೀಡಿತ್ತು.
ಈ ಬಿಲ್ ಹೆಚ್ಚಳದ ವಿಷಯ ಕರ್ನಾಟಕದಲ್ಲಿ ಮಾತ್ರವಲ್ಲ, ನೆರೆಯ ಮಹಾರಾಷ್ಟ್ರದಲ್ಲೂ ಪ್ರತಿಧ್ವನಿಸಿದೆ. ಬಿಲ್ ಹೆಚ್ಚಳ ಜನಸಾಮಾನ್ಯರನ್ನು ಮಾತ್ರವಲ್ಲ ಸೆಲೆಬ್ರಿಟಿಗಳಿಗೂ ತಟ್ಟಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರ ಚಿತ್ರದಲ್ಲಿ ನಾಯಕಿಯಾಗಿದ್ದ ಶ್ರದ್ಧಾ ದಾಸ್ ತಮಗೆ ಬಂದ ವಿದ್ಯುತ್ ಬಿಲ್ ನೋಡಿ ಶಾಕ್ ಆಗಿದ್ದಾರೆ. ಅಲ್ಲದೆ ಈ ಕುರಿತು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಧ್ವನಿಯೆತ್ತಿದ್ದಾರೆ.
ಶ್ರದ್ಧಾ ದಾಸ್ ಅವರ ಮನೆಯ ಜೂನ್ ತಿಂಗಳ ವಿದ್ಯುತ್ ಬಿಲ್ 26 ಸಾವಿರ ರೂಪಾಯಿ ಬಂದಿದ್ದು, ಆದರೆ ನಾನು ವಿದ್ಯುತ್ ಬಳಕೆ ಹೆಚ್ಚಳ ಮಾಡಿಲ್ಲ ಎಂದು ಶ್ರದ್ಧಾ ದಾಸ್ ಹೇಳುತ್ತಿದ್ದಾರೆ. ಕೆಲದಿನಗಳ ಹಿಂದೆ ನಟಿ ಕಾರ್ತಿಕಾ ನಾಯರ್ ಅವರ ಮನೆಯ ವಿದ್ಯುತ್ ಬಿಲ್ ಒಂದು ಲಕ್ಷ ರೂಪಾಯಿ ಬಂದಿತ್ತು ಎಂದು ಹೇಳಲಾಗಿದೆ.