ದೇಶದಲ್ಲಿ ತೈಲಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಇದನ್ನು ವಿರೋಧಿಸಿ ಇಂದು ಸೈಕಲ್ ಚಳುವಳಿ ನಡೆಸಲು ತೀರ್ಮಾನಿಸಿದ್ದಾರೆ.
ಹೀಗಾಗಿ ಇಂದು ಬೆಳಗ್ಗೆ 9.30 ಕ್ಕೆ ತಮ್ಮ ಮನೆಗಳಿಂದ ಕೆಪಿಸಿಸಿ ಕಚೇರಿಗೆ ಕಾಂಗ್ರೆಸ್ ನಾಯಕರು ಸೈಕಲ್ ನಲ್ಲಿ ಆಗಮಿಸಲಿದ್ದು, ಬಳಿಕ ಆದಾಯ ತೆರಿಗೆ ಕಚೇರಿ ಎದುರು ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಆದರೆ ಬಹುತೇಕ ನಾಯಕರಿಗೆ ಸೈಕಲ್ ತುಳಿಯುವ ಅಭ್ಯಾಸವೇ ತಪ್ಪಿ ಹೋಗಿದೆ. ಹೀಗಾಗಿ ಭಾನುವಾರದಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲ ನಾಯಕರು ಹೊಸ ಸೈಕಲ್ ತರಿಸಿಕೊಂಡು ಅದರಲ್ಲಿ ತಮಗೆ ಬೇಕಾದ್ದನ್ನು ಆರಿಸಿಕೊಂಡ ಬಳಿಕ ರಿಹರ್ಸಲ್ ನಡೆಸಿದ್ದಾರೆ.