ಮಳೆಗಾಲ ಶುರುವಾಗಿದೆ. ಇದರ ಬೆನ್ನಲ್ಲೇ ಶೀತ, ಕೆಮ್ಮು , ಗಂಟಲು ಕೆರೆತ ಕೂಡ ಶುರುವಾಗುತ್ತದೆ. ಮಳೆಗಾಲಕ್ಕೆ ಒಂದಷ್ಟು ತಯಾರಿ ಮಾಡಿಕೊಂಡರೆ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ಮಳೆಗಾಲದ ಆರೋಗ್ಯಕ್ಕಾಗಿ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.
ಮಕ್ಕಳನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಹೋಗುವಾಗ ಒಂದು ಜತೆ ಬಟ್ಟೆಯನ್ನು ಬ್ಯಾಗ್ ನಲ್ಲಿಟ್ಟುಕೊಂಡು ಹೋಗಿ. ಮಕ್ಕಳು ಮಳೆಯಲ್ಲಿ ನೆನೆದರೆ ಬೇಗನೆ ಶೀತ, ಕೆಮ್ಮು ಸಮಸ್ಯೆಗೆ ಒಳಗಾಗುತ್ತಾರೆ. ಹಾಗೇ ರೈನ್ ಕೋಟ್, ಕೊಡೆಯನ್ನು ತೆಗೆದುಕೊಂಡು ಹೋಗುವುದನ್ನು ಮರೆಯದಿರಿ.
ಇನ್ನು ಶುಂಠಿ ಕಷಾಯ, ಮಸಾಲಾ ಟೀಯನ್ನು ಮಾಡಿಕೊಂಡು ಕುಡಿಯುತ್ತಿರಿ. ಇದರಿಂದ ಗಂಟಲಿನ ಕೆರೆತ ನಿವಾರಣೆಯಾಗುತ್ತದೆ.
ಮಳೆಗಾಲದಲ್ಲಿ ಬಜ್ಜಿ, ಬೋಂಡಾ ತಿನ್ನಬೇಕು ಎಂಬ ಆಸೆ ಜಾಸ್ತಿ ಇರುತ್ತದೆ. ಯಾವುದೇ ಕಾರಣಕ್ಕೂ ಬೀದಿ ಬದಿಯ ಚಾಟ್ಸ್ ಗಳನ್ನು ತಿನ್ನಬೇಡಿ. ಆದಷ್ಟು ಮನೆಯ ಅಡುಗೆಯನ್ನು ತಿನ್ನಿ. ಇದರಿಂದ ಆರೋಗ್ಯ ಹದಗೆಡುವುದು ತಪ್ಪುತ್ತದೆ.
ಬೆಚ್ಚಗಿನ ಬಟ್ಟೆ, ಬಿಸಿ ನೀರು ಕುಡಿಯವುದು, ಬಿಸಿ ನೀರಿನಿಂದ ಬಾಯಿ ಮುಕ್ಕಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.