
ಸ್ನ್ಯಾಕ್ಸ್ ಏನಾದರೂ ಮಾಡಿದಾಗ ಅದನ್ನು ನೆಂಚಿಕೊಳ್ಳಲು ಟೊಮೆಟೊ ಕೆಚಪ್ ಇದ್ದರೆ ಸಖತ್ ಆಗಿರುತ್ತದೆ. ಹೊರಗಡೆಯಿಂದ ಕೆಮಿಕಲ್ ಯುಕ್ತ ಕೆಚಪ್ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ತಯಾರಿಸಿ ಫ್ರೆಶ್ ಟೊಮೆಟೊ ಕೆಚಪ್.
ಬೇಕಾಗುವ ಸಾಮಗ್ರಿಗಳು:
ತಾಜಾ ಟೊಮೆಟೊ-9, ಖಾರದಪುಡಿ-1 ಚಮಚ, ಸಕ್ಕರೆ-1/2 ಕಪ್, ವಿನೇಗರ್-3 ಚಮಚ, ನೀರು-1 ಗ್ಲಾಸ್.
ಮಾಡುವ ವಿಧಾನ:
ಮೊದಲು ಟೊಮೆಟೊ ಹಣ್ಣುಗಳನ್ನು ತೆಗೆದುಕೊಂಡು ಚಿಕ್ಕದಾಗಿ ಕತ್ತರಿಸಿಕೊಂಡು ಅದನ್ನು ಒಂದು ಕುಕ್ಕರ್ ಗೆ ಹಾಕಿ ನೀರು ಸೇರಿಸಿ 2 ವಿಷಲ್ ಕೂಗಿಸಿಕೊಳ್ಳಿ. ಈ ಟೊಮೆಟೊ ತಣ್ಣಗಾದ ಮೇಲೆ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿ ಶೋಧಿಸಿಕೊಂಡು ಟೊಮೆಟೊ ಪ್ಯೂರಿ ರೆಡಿ ಮಾಡಿಕೊಳ್ಳಿ.
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಈ ಟೊಮೆಟೊ ಪ್ಯೂರಿ, ಸಕ್ಕರೆ, ಖಾರದಪುಡಿ, ವಿನೇಗರ್ ಹಾಕಿ ಒಂದು ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ. ನಂತರ ಇದನ್ನು ಒಂದು ಸೌಟಿನ ಸಹಾಯದಿಂದ ದಪ್ಪಗಾಗುವವರೆಗೆ ಮಗಚುತ್ತಾ ಇರಿ. ಇದು ದಪ್ಪಗಾದ ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಇದನ್ನು ತುಂಬಿಸಿ ಫ್ರಿಡ್ಜ್ ನಲ್ಲಿಡಿ.