ನಾನ್ ವೆಜ್ ಪ್ರಿಯರಿಗೆ ಇಲ್ಲಿ ರುಚಿಕರವಾದ ಮಟನ್ ಕೀಮಾ ಮಾಡುವ ವಿಧಾನ ಇದೆ. ಸುಲಭವಾಗಿ ಮಾಡಬಹುದು. ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ಮಟನ್ ಕೀಮಾ-100 ಗ್ರಾಂ, ಹಸಿ ಬಟಾಣಿ-1/2 ಕಪ್, ಎಣ್ಣೆ-4 ಚಮಚ, ಕತ್ತರಿಸಿದ ಈರುಳ್ಳಿ-2, ಕತ್ತರಿಸಿದ ಟೊಮೆಟೊ-2, ಸೀಳಿದ ಹಸಿಮೆಣಸು-2, ಕೊತ್ತಂಬರಿಸೊಪ್ಪು-3/4 ಕಪ್, ಶುಂಠಿ ಬೆಳ್ಳುಳ್ಳಿ ಪೇಸ್ಟ್-2 ಚಮಚ, ಉಪ್ಪು-1 ½ ಚಮಚ, ನೀರು-3/4 ಗ್ಲಾಸ್, ಲವಂಗ-4, ಏಲಕ್ಕಿ-1, ಪಲಾವ್ ಎಲೆ-1, ಕಪ್ಪು ಏಲಕ್ಕಿ-1, ಚಕ್ಕೆ-1 ತುಂಡು, ಖಾರದಪುಡಿ-1 ½ ಚಮಚ, ಅರಿಶಿನ-1/4 ಚಮಚ, ಗರಂ ಮಸಾಲ-1 ಚಮಚ.
ಮಾಡುವ ವಿಧಾನ:
ಮೊದಲಿಗೆ ಒಂದು ಕುಕ್ಕರ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ ಲವಂಗ, ಚಕ್ಕೆ, ಏಲಕ್ಕಿ, ಪಲಾವ್ ಎಲೆ ಹಾಕಿ ಸ್ವಲ್ಪ ಫ್ರೈ ಮಾಡಿ ನಂತರ ಅದಕ್ಕೆ ಈರುಳ್ಳಿ, ಹಸಿಮೆಣಸು ಸೇರಿಸಿ ಸ್ವಲ್ಪ ಫ್ರೈ ಮಾಡಿ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರಗೆ ಹುರಿದು ಟೊಮೆಟೊ ಸೇರಿಸಿ.
ಉಪ್ಪು, ಅರಿಶಿನ, ಖಾರದ ಪುಡಿ, ಗರಂ ಮಸಾಲ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಮಟನ್ ಕೀಮಾ ಹಾಕಿ ಚೆನ್ನಾಗಿ ಫ್ರೈ ಮಾಡಿ ಇದಕ್ಕೆ ಹಸಿ ಬಟಾಣಿ ಸೇರಿಸಿ ನೀರು, ಕೊತ್ತಂಬರಿಸೊಪ್ಪು ಸೇರಿಸಿ 6 ವಿಷಲ್ ಕೂಗಿಸಿಕೊಂಡರೆ ರುಚಿಕರವಾದ ಮಟನ್ ಕೀಮಾ ರೆಡಿ.