ಮೈಸೂರು: ಸುಮಾರು 4 ದಶಕಗಳಿಂದ ಅತ್ಯಂತ ಜನಪ್ರಿಯ ಹೋಟೆಲ್ ಆಗಿದ್ದ ರಮ್ಯಾ ಮಹೇಂದ್ರ ಹೋಟೆಲ್ ಬಂದ್ ಆಗಿದೆ.
ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ, ದಿ. ಎಸ್ ಬಂಗಾರಪ್ಪ, ವರನಟ ಡಾ. ರಾಜಕುಮಾರ್ ಅವರ ಅಚ್ಚುಮೆಚ್ಚಿನ ಹೋಟೆಲ್ ಆಗಿದ್ದ ಮೈಸೂರಿನ ರಮ್ಯಾ ಮಹೇಂದ್ರ ಹೋಟೆಲ್ ಕೊರೋನಾ ಹೊಡೆತದಿಂದ ಇತಿಹಾಸದ ಪುಟ ಸೇರಿದೆ.
ಗ್ರಾಹಕರಿಲ್ಲದ ಕಾರಣ ಸುಮಾರು 40 ವರ್ಷಗಳಷ್ಟು ಹಳೆಯದಾದ ರಮ್ಯಾ ಮಹೇಂದ್ರ ರೆಸ್ಟೋರೆಂಟ್ ಬಂದ್ ಮಾಡಲಾಗಿದೆ. ಬಹಳಷ್ಟು ಮಂದಿ ಸೆಲೆಬ್ರಿಟಿಗಳು ಈ ಹೋಟೆಲ್ ಗೆ ಹೋಗಿ ಬಂದಿದ್ದಾರೆ.
ಇದು ಪ್ರಭಾವಿ ರಾಜಕಾರಣಿಗಳು, ಸೆಲೆಬ್ರಿಟಿಗಳ ಹಾಟ್ ಸ್ಪಾಟ್ ಆಗಿತ್ತು. ಅನೇಕ ರಾಜಕಾರಣಿಗಳು, ಕಲಾವಿದರು ಇಲ್ಲಿಗೆ ಬಂದು ಹೋಗಿದ್ದು, ಹಲವರು ಪ್ರೆಸ್ ಮೀಟ್ ಕೂಡ ಮಾಡಿದ್ದಾರೆ. ಈಗ ಹೋಟೆಲ್ ಬಂದ್ ಮಾಡಿರುವ ಮಾಲೀಕರು ಮುಂದಿನ ದಿನಗಳಲ್ಲಿ ಮತ್ತೆ ಪುನಾರಂಭಿಸುವ ವಿಶ್ವಾಸದಲ್ಲಿದ್ದಾರೆ.