
ಕೋಳಿ, ಮೊಟ್ಟೆಯಿಟ್ಟು ಕಾವು ಕೊಟ್ಟರೆ ಅದು ಮರಿಯಾಗಿ ಹೊರ ಬರುತ್ತದೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ, ಕೋಳಿ ಕಾವು ಕೊಡದೇ ಒಡೆದ ಮೊಟ್ಟೆಯಿಂದಲೂ ಮರಿ ಹೊರ ಬರುತ್ತದೆ. ಹೌದು, ಒಡೆದ ಮೊಟ್ಟೆಯಿಂದ ಕೋಳಿ ಮರಿ ಬೆಳೆಸುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಒಡೆದ ಮೊಟ್ಟೆಯಲ್ಲಿರುವ ಭ್ರೂಣಕ್ಕೆ ಇಂಜಕ್ಷನ್ ಚುಚ್ಚಲಾಗುತ್ತದೆ. ನಂತರ ಅದನ್ನು ಪ್ಲಾಸ್ಟಿಕ್ ಒಂದರಿಂದ ಮುಚ್ಚಿಡಲಾಗುತ್ತದೆ. ಹಂತ ಹಂತವಾಗಿ ಭ್ರೂಣ ಬೆಳೆದು ಮರಿಯಾದ ನಂತರ ಅದನ್ನು ಮೊಟ್ಟೆದ ಹೊರ ತೆಗೆಯಲಾಗುತ್ತದೆ. ಹಲವು ದಿನಗಳ ಈ ಪ್ರಕ್ರಿಯೆಯನ್ನು ಕೆಲವೇ ನಿಮಿಷದ ವಿಡಿಯೋದಲ್ಲಿ ಕಟ್ಟಿ ಕೊಡಲಾಗಿದೆ.
ಈ ವಿಡಿಯೋ ನೋಡಿ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ. ಈ ಬಗ್ಗೆ ಅನೇಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಜಗತ್ತಿನ ವಿಸ್ಮಯಗಳಲ್ಲೊಂದು ಎಂದು ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಮಾಣದಲ್ಲಿ ಹರಿದಾಡುತ್ತದೆ.