ನವದೆಹಲಿ: ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಡೆಕ್ಸಾಮೆಥಾಸೋನ್ ಸ್ಟಿರಾಯ್ಡ್ ಬಳಸಬಹುದು ಎಂದು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಡೆಕ್ಸಾಮೆಥಾಸೋನ್ ಸ್ಟಿರಾಯ್ಡ್ ಕೊರೋನಾ ಚಿಕಿತ್ಸೆಗೆ ಪರಿಣಾಮಕಾರಿ ಔಷಧ ಎನ್ನುವುದು ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ತೀವ್ರ ಕೊರೊನಾ ಬಾಧಿತ ರೋಗಿಗಳ ಚಿಕಿತ್ಸೆಗೆ ಇದನ್ನು ಬಳಸಬಹುದು ಎಂದು ಕೇಂದ್ರ ಆರೋಗ್ಯ ಮಂತ್ರಾಲಯ ಅನುಮತಿ ನೀಡಿದೆ.
ಕೋವಿಡ್-19 ಚಿಕಿತ್ಸೆಯ ನಿರ್ವಹಣೆ ನಿಯಮಗಳನ್ನು ಪರಿಷ್ಕರಿಸಲಾಗಿದ್ದು, ಡೆಕ್ಸಾಮೆಥಾಸೋನ್ ಸ್ಟಿರಾಯ್ಡ್ ಬಳಕೆಗೆ ಅವಕಾಶ ನೀಡಲಾಗಿದೆ. ಸಂಧಿವಾತ ಮೊದಲಾದ ರೋಗಗಳಲ್ಲಿ ಉರಿಯೂತದ ನೋವು ನಿವಾರಿಸಲು ಡೆಕ್ಸಾಮೆಥಾಸೋನ್ ಸ್ಟಿರಾಯ್ಡ್ ಬಳಸಲಾಗುತ್ತದೆ. ದೇಶದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಡೆಕ್ಸಾಮೆಥಾಸೋನ್ ಸ್ಟಿರಾಯ್ಡ್ ಅನ್ನು ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಸಲು ಆರೋಗ್ಯ ಸಚಿವಾಲಯ ಸಮ್ಮತಿ ನೀಡಿದೆ. ಕೊರೋನಾ ಸೋಂಕಿತರ ಮೇಲೆ ಇದನ್ನು ಪ್ರಯೋಗಿಸಿದಾಗ ಸಕಾರಾತ್ಮಕ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.