ಪುಣೆ/ನವದೆಹಲಿ: ನೈರುತ್ಯ ಮಾನ್ಸೂನ್ ಯಾವುದೇ ಅಬ್ಬರವಿಲ್ಲದೇ ಈ ಬಾರಿ ನಿಧಾನ ಗತಿಯಲ್ಲಿ ಇಡೀ ದೇಶವನ್ನು ವ್ಯಾಪಿಸಿದೆ. ಸಾಮಾನ್ಯವಾಗಿ ಜುಲೈ 8ರಂದು ದೇಶವನ್ನು ತಲುಪುತ್ತಿತ್ತು. ಈ ವರ್ಷ ಸಾಮಾನ್ಯಕ್ಕಿಂತ 12 ದಿನ ಮುಂಚಿತವಾಗಿ ಮಾನ್ಸೂನ್ ಇಡೀ ದೇಶವನ್ನು ತಲುಪಿದಂತಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
2013 ರ ನಂತರ 2015 ರಲ್ಲಿ ಮಾನ್ಸೂನ್ ಅತೀ ವೇಗವಾಗಿ ದೇಶವನ್ನು ಆವರಿಸಿತ್ತು. ಕಳೆದ 13 ವರ್ಷದಲ್ಲಿ ಇದೇ ಮೊದಲ ಬಾರಿಗೆ ಮಾನ್ಸೂನ್ ಜೂನ್ 26 ಕ್ಕಿಂತ ಮುಂಚೆಯೇ ದೇಶವನ್ನು ವ್ಯಾಪಿಸಿದೆ. ಕೇರಳವನ್ನು ತಲುಪಿದ 26 ದಿನಗಳ ನಂತರ ಮಾನ್ಸೂನ್ ಶುಕ್ರವಾರ ಪಂಜಾಬ್, ಹರಿಯಾಣ, ರಾಜಸ್ತಾನಕ್ಕೆ ತಲುಪಿದೆ.
ಇದರಿಂದ ಕೃಷಿ ಚಟುವಟಿಕೆ ಎಲ್ಲ ಕಡೆ ಗರಿಗೆದರಿದಂತಾಗಿದೆ. ಜೊತೆಗೆ ಮುಂಗಾರಿನ ಬಿತ್ತನೆ ಎಲ್ಲೆಡೆ ಪ್ರಾರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಾನ್ಸೂನ್ ಮಳೆ ಎಲ್ಲೆಡೆ ಆಗುತ್ತಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.