alex Certify ಮನೆಯಲ್ಲೇ ಕುಳಿತು ‘ಪಡಿತರ ಚೀಟಿ’ಗೆ ಹೀಗೆ ಸೇರಿಸಿ ಹೆಸರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಕುಳಿತು ‘ಪಡಿತರ ಚೀಟಿ’ಗೆ ಹೀಗೆ ಸೇರಿಸಿ ಹೆಸರು…!

ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಪಡಿತರ ಚೀಟಿ ಬಹಳ ಮುಖ್ಯ. ಬಡವರ ಹಸಿವು ನೀಗಿಸಲು ಕೇಂದ್ರ ಸರ್ಕಾರ ಈ ಕಾರ್ಡ್‌ಗಳ ಮೂಲಕ ಆಹಾರ ಧಾನ್ಯಗಳನ್ನು ಜನರಿಗೆ ವಿತರಿಸಿದೆ.

ಅನೇಕ ಸರ್ಕಾರಿ ಯೋಜನೆಗಳಿಗೆ ಪಡಿತರ ಚೀಟಿಯನ್ನು ದಾಖಲೆ ರೂಪದಲ್ಲಿ ನೀಡಲಾಗುತ್ತದೆ. ಹಾಗಾಗಿ ರೇಷನ್ ಕಾರ್ಡ್ ನವೀಕರಣ ಬಹಳ ಮುಖ್ಯ. ಕುಟುಂಬದ ಸದಸ್ಯರ ಹೆಸರು ಪಡಿತರ ಚೀಟಿಯಲ್ಲಿಲ್ಲವೆಂದ್ರೆ ಅದನ್ನು ಮನೆಯಲ್ಲಿ ಕುಳಿತು ನವೀಕರಿಸಬಹುದು.

ಮಗುವಿನ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಲು ಮನೆಯ ಮುಖ್ಯಸ್ಥರ ಪಡಿತರ ಚೀಟಿ ಬೇಕು. ಮಗುವಿನ ಜನನ ಪ್ರಮಾಣಪತ್ರ, ಪೋಷಕರ ಆಧಾರ್ ಕಾರ್ಡ್ ನೀಡಬೇಕು.

ಸೊಸೆ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಲು ಆಧಾರ್ ಕಾರ್ಡ್, ಮದುವೆ ಪ್ರಮಾಣಪತ್ರ, ಗಂಡನ ಪಡಿತರ ಚೀಟಿಯ ಫೋಟೊ ಕಾಪಿ ಮತ್ತು ಮೂಲ ನಕಲನ್ನು ನೀಡಬೇಕು. ಇದಲ್ಲದೆ ಪೋಷಕರ ಮನೆಯಲ್ಲಿದ್ದ ಪಡಿತರ ಚೀಟಿಯಿಂದ ಹೆಸರನ್ನು ತೆಗೆದುಹಾಕಿದ ಪ್ರಮಾಣಪತ್ರ ಬೇಕು.

ಪಡಿತರ ಚೀಟಿಯಲ್ಲಿನ ಯಾವುದೇ ಮಾಹಿತಿಯನ್ನು ನವೀಕರಿಸಲು, ಸಂಬಂಧಪಟ್ಟ ರಾಜ್ಯದ ಆಹಾರ ಪೂರೈಕೆ ವಿಭಾಗದ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕಾಗುತ್ತದೆ. ಮೊದಲ ಬಾರಿಗೆ, ನೀವು ಈ ವೆಬ್‌ ಸೈಟ್‌ನಲ್ಲಿ ಲಾಗಿನ್ ಐಡಿಯನ್ನು ರಚಿಸಬೇಕಾಗುತ್ತದೆ. ಅದು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ.

ಲಾಗಿನ್ ಮಾಡಿದ ನಂತರ, ಈ ವೆಬ್‌ಸೈಟ್‌ನ ಮುಖಪುಟದಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸುವ ಆಯ್ಕೆಯನ್ನು ನೀವು ಪಡೆಯುತ್ತೀರಿ. ಈ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಹೊಸ ಪೇಜ್ ತೆರೆಯುತ್ತದೆ. ಅಲ್ಲಿ ಫಾರ್ಮ್ ಭರ್ತಿ ಮಾಡಿ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳ ಸ್ಕಾನ್‌ ಕಾಪಿಯನ್ನು ಸಹ ಅಪ್‌ಲೋಡ್ ಮಾಡಬೇಕಾಗುತ್ತದೆ. ಇದರ ನಂತರ ಫಾರ್ಮ್ ಅನ್ನು ಸಲ್ಲಿಸಬೇಕಾಗಿದೆ.

ಫಾರ್ಮ್ ಅನ್ನು ಸಲ್ಲಿಸಿದ ನಂತರ ನೋಂದಣಿ ಸಂಖ್ಯೆ ಸಿಗುತ್ತದೆ. ಅದ್ರ ಮೂಲಕ ವೆಬ್‌ಸೈಟ್‌ಗೆ ಲಾಗಿನ್ ಆಗಬಹುದು ಮತ್ತು ಫಾರ್ಮ್ ಅನ್ನು ಟ್ರ್ಯಾಕ್ ಮಾಡಬಹುದು. ಎಲ್ಲ ದಾಖಲೆ ಸರಿಯಿದ್ದರೆ ಮನೆಗೆ ಹೊಸ ಪಡಿತರ ಚೀಟಿಯನ್ನು ಕಳುಹಿಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...