ಪಡಿತರ ಚೀಟಿಯಲ್ಲಿ ಮನೆಯ ಸದಸ್ಯರ ಹೆಸರು ಬಿಟ್ಟು ಹೋಗಿದೆಯಾ..? ಹಾಗಾದ್ರೆ ಚಿಂತೆ ಪಡಬೇಕಿಲ್ಲ. ಬಿಟ್ಟು ಹೋದ ಸದಸ್ಯರ ಹೆಸರನ್ನು ಸೇರಿಸಬಹುದಾಗಿದೆ. ಹೇಗೆ ಅಂತೀರಾ ಮುಂದೆ ನೋಡಿ..!
ಸರ್ಕಾರದ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಅಡಿಯಲ್ಲಿ ಇದನ್ನು ಜಾರಿಗೆ ತರಲಾಗಿದೆ. ಆನ್‌ಲೈನ್ ಮೂಲಕ ನಿಮ್ಮ ಮನೆಯ ಸದಸ್ಯರ ಹೆಸರನ್ನು ಸೇರಿಸಬಹುದು. ಹಾಗೂ ಸರ್ಕಾರದ ಸಂಪೂರ್ಣ ಲಾಭವನ್ನು ಪಡೆಯಬಹುದಾಗಿದೆ.
ಮೊದಲು ನಿಮ್ಮ ಹತ್ತಿರದ ಆಹಾರ ಪೂರೈಕೆ ಕೇಂದ್ರಕ್ಕೆ ಹೋಗಿ. ಅಲ್ಲಿ ಕೇಳುವ ದಾಖಲೆಗಳನ್ನು ನೀಡಿ. ಜೊತೆಗೆ ಫಾರ್ಮ್ ಒಂದರಲ್ಲಿ ವಿವರವನ್ನು ನೀಡಬೇಕಾಗುತ್ತದೆ. ಎಲ್ಲಾ ವಿಧಾನಗಳು ಮುಗಿದ ನಂತರ ಆನ್ ಲೈನ್ ಅಪ್ಲಿಕೇಶನ್ ನ ಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ. ಈ ಪ್ರಕ್ರಿಯೆ ಮುಗಿದ 2 ವಾರಗಳ ನಂತರ ನಿಮ್ಮ ರೇಷನ್ ಕಾರ್ಡ್ ನಿಮ್ಮ ಮನೆ ತಲುಪುತ್ತದೆ.