ಒಡಹುಟ್ಟಿದವರೊಂದಿಗೆ ಬಾಲ್ಯದ ದಿನಗಳಲ್ಲಿ ಮಾಡುತ್ತಿದ್ದ ಚೇಷ್ಟೆಗಳು ನಮಗೆಲ್ಲಾ ಬಹಳ ಸವಿನೆನಪುಗಳನ್ನು ಕಟ್ಟಿಕೊಡುತ್ತವೆ. ಕೇವಲ ಮನುಷ್ಯರು ಮಾತ್ರವಲ್ಲ, ಯಾವುದೇ ಜೀವಿಯೂ ಸಹ ತನ್ನ ಬಾಲ್ಯಾವಸ್ಥೆಯಲ್ಲಿ ಬಹಳ ತುಂಟತನ ಹಾಗೂ ಚೇಷ್ಟೆಗಳನ್ನು ಮಾಡುವುದನ್ನು ನೋಡುವುದೇ ಒಂದು ಚಂದ.
ಆನೆ ಮರಿಯೊಂದು ತನ್ನ ಜೊತೆ ಹುಟ್ಟಿದ ಮತ್ತೊಂದು ಮರಿಯನ್ನು ನೀರಿನ ಗುಂಡಿಗೆ ತಳ್ಳುತ್ತಾ ಜಲಕ್ರೀಡೆಯಲ್ಲಿ ತೊಡಗಿರುವ ವಿಡಿಯೋವೊಂದನ್ನು ಭಾರತಿಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇಂಥ ತುಂಟಾಟಗಳಲ್ಲಿ ಆನೆ ಮರಿಗಳಿಗೆ ಸಾಟಿಯೇ ಇಲ್ಲ ಎಂದು ಈ ಅಧಿಕಾರಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.