
ಕೊರೊನಾ ಲಾಕ್ಡೌನ್ ಕಾರಣಕ್ಕಾಗಿ ದೇಶದ ಆರ್ಥಿಕ ಚಟುವಟಿಕೆ ಕುಸಿದಿದ್ದು, ನೌಕರರು ತಮ್ಮ ಉದ್ಯೋಗ ಭದ್ರತೆಯ ಕುರಿತು ಆತಂಕ ಹೊಂದಿದ್ದಾರೆ. ಇದರ ಮಧ್ಯೆ ಮತ್ತೊಂದು ಶಾಕಿಂಗ್ ಸಂಗತಿ ಹೊರಬಿದ್ದಿದೆ
ಇಪಿಎಫ್ಒ ಗೆ ತನ್ನ ಹೂಡಿಕೆ ಆದಾಯ ಇಳಿಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ಪಿಎಫ್ ಬಡ್ಡಿ ದರ ಕಡಿತ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಹೀಗಾಗಿ ಕಳೆದ ಮಾರ್ಚ್ ನಲ್ಲಿ ಘೋಷಿಸಿದ್ದ ಶೇ.8.5 ಬಡ್ಡಿದರ ಸಿಗುವ ಸಾಧ್ಯತೆ ವಿರಳ ಎನ್ನಲಾಗಿದೆ.
ಪಿಎಫ್ ಮೇಲಿನ ಬಡ್ಡಿದರ ಶೇ.8.1 ಕ್ಕೆ ಇಳಿಕೆಯಾಗಬಹುದು ಎಂದು ಹೇಳಲಾಗುತ್ತಿದ್ದು, ಹಣಕಾಸು ಸಚಿವಾಲಯ ಇದಕ್ಕೆ ಅನುಮತಿ ನೀಡಿದರೆ ಇದು ಅನುಷ್ಠಾನಕ್ಕೆ ಬರಲಿದೆ.